ಜಿಲ್ಲೆ

ಒಟ್ಟುಗೂಡಿ ಕಾರ್ಯನಿರ್ವಹಿಸಿದರೆ ಗೆಲುವು : ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ

ಸೌಮ್ಯ ಆರ್

ಕುಂಬಳೆ: ದೈವ ದೇವರ ಜೀರ್ಣೋದ್ಧಾರ ಕಾರ್ಯ ನಡೆದರೆ ಊರಿಗೆ ಕೀರ್ತಿ, ಗೆಲುವು ಪ್ರಾಪ್ತಿ. ಒಟ್ಟುಗೂಡಿ ಕಾರ್ಯನಿರ್ವಹಿಸಿದರೆ ಗೆಲುವು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅಡ್ಕ ಶ್ರೀ ಚಕ್ರಪದಿ ಬೀರಮಾರ್ಲರ ಮಾಡದ ದೈವಗಳ ಹಾಗೂ ನಾಗದೇವರ ಪುನಃ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಅಂಗವಾಗಿ ಬುಧವಾರ ಧಾರ್ಮಿಕ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ಶುಭಹಾರೈಸಿದರು. ಬೀರಮಾರ್ಲರ ಮಾಡ ಟ್ರಸ್ಟ್ ಅಧ್ಯಕ್ಷ ಮಲಾರು ಜಯರಾಮ ರೈ ಅಧ್ಯಕ್ಷತೆ ವಹಿಸಿದ್ದರು. ತಂತ್ರಿ ಬಡಾಜೆ ಬೂಡು ಗೋಪಾಲಕೃಷ್ಣ ಭಟ್, ಉದ್ಯಮಿ ಕುಳೂರು ಕನ್ಯಾನ ಸದಾಶಿವ ಕೆ.ಶೆಟ್ಟಿ, ಅಡ್ಕ ಬೀರಮಾರ್ಲರ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವದ ಅಧ್ಯಕ್ಷ ಬರೋಡ ಶಶಿಧರ ಬಿ.ಶೆಟ್ಟಿ, ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ, ಶ್ರೀಧರ ಭಟ್ ಉಪ್ಪಳ, ಸೀರೆ ಶಂಕರನಾರಾಯಣ ದೇವಸ್ಥಾನದ ಪ್ರಶಾಂತ್ ಶಿರಿಯ,

ಉದ್ಯಾವರ ರಾಜ ಬೆಳ್ಚಪ್ಪಾಡ, ಮುಂಡಪಳ್ಳ ಕೆ.ಕೆ.ಶೆಟ್ಟಿ, ಒಡಿಯುರು ಸೇವಾ ಬಳಗದ ಪುಣೆ ಪ್ರಭಾಕರ ಶೆಟ್ಟಿ ಮಾನಂದೆ, ಡಾ.ವಿಜಯ ಪಂಡಿತ್ ಉಪಸ್ಥಿತರಿದ್ದರು.

ಧರ್ಮಪ್ರಸಾದ್ ರೈ ಸ್ವಾಗತಿಸಿದರು. ಚಂದ್ರಪ್ರಭಾ ಹೆಗ್ಡೆ ಪ್ರಸ್ತಾವಿಸಿದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ರವಿರಾಜ್ ಶೆಟ್ಟಿ ವಂದಿಸಿದರು.

ಧಾರ್ಮಿಕ ವಿಧಿವಿಧಾನ, ನೇಮ

ಬೆಳಗ್ಗೆ ಶ್ರೀ ಚಕ್ರಪದಿ ಬೀರಮಾರ್ಲರ ದೈವಗಳ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ, ಆಶ್ಲೇಷ ಬಲಿ ಪೂಜೆ, ನಾಗತಂಬಿಲ, ಪ್ರಸಾದ ವಿತರಣೆ ಜರಗಿತು. ಬಳಿಕ ಅಣ್ಣ ದೈವದ ನೇಮ, ಸಂಜೆ ತಮ್ಮ ದೈವದ ನೇಮ, ಪ್ರಸಾದ ವಿತರಣೆ ಜರುಗಿತು.