ಜಿಲ್ಲೆ

ಪೂರ್ವಭಾವಿ ಸಭೆ ಮುಂದೂಡಿಕೆ

ಇಂಡಿ: ಪಟ್ಟಣದಲ್ಲಿ ಮಾ.26 ರಂದು ನಡೆಯಬೇಕಿದ್ದ ಡಾ. ಬಾಬು ಜಗಜೀವನರಾಮ್​ ಮತ್ತು 14 ರಂದು ಡಾ. ಬಿ.ಆರ್​. ಅಂಬೇಡ್ಕರ್​ ಆಚರಣೆ ಪೂರ್ವಭಾವಿ ಸಭೆ ಮುಂದೂಡಲಾಯಿತು.

ತಹಸೀಲ್ದಾರ್​ ಕಚೇರಿ ಸಭಾಂಗಣದಲ್ಲಿ ತಹಸೀಲ್ದಾರ್​ ಬಿ.ಎಸ್​. ಕಡಕಬಾವಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ನಡೆಯಬೇಕಿತ್ತು. ಆದರೆ, ತಾಲೂಕುಮಟ್ಟದ ಬಹುತೇಕ ಅಧಿಕಾರಿಗಳು ಗೈರು ಇದ್ದುದ್ದರಿಂದ ಸಭೆ ಮುಂದೂಡಲಾಯಿತು.

ಚಂದ್ರಶೇಖರ ಹೊಸಮನಿ, ಬಾಬು ಗುಡಮಿ, ದತ್ತಾ ಬಂಡೇನವರ, ವಿನಾಯಕ ಗುಣಸಾಗರ, ಧರ್ಮರಾಜ ಸಾಲೋಟಗಿ, ಪರಶುರಾಮ ಭಾವಿಕಟ್ಟಿ, ಸಂತೋಷ ಕಾಳೆ, ಸಂತೋಷ ಮ್ಯಾಗೇರಿ ಸೇರಿ ಸಭೆಯಲ್ಲಿದ್ದ ಎಲ್ಲ ಸಮುದಾಯ ಮುಖಂಡರು ಅಧಿಕಾರಿಗಳ ಗೈರು ಹಾಜರಿಯಿಂದ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಅಂತ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹೊರನಡೆದರು.

ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಚವ್ಹಾಣ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಮಹಾದೇವಪ್ಪ ಏವೂರ, ಎಚ್​.ಎಸ್​. ಪಾಟೀಲ, ಎಸ್​.ಆರ್​. ಗದ್ಯಾಳ ಮತ್ತಿತರರಿದ್ದರು.