ಮಂಗಳೂರು: ಭರತನಾಟ್ಯ ಗುರು ರಾಧಿಕಾ ಶೆಟ್ಟಿ ಅವರ ಶಿಷ್ಯೆ ಅದಿತಿ ಲಕ್ಷ್ಮೀ ಭಟ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಭಾನುವಾರ ನಗರದ ಡಾನ್ಬಾಸ್ಕೋ ಸಭಾಂಗಣದಲ್ಲಿ ಜರುಗಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸತ ಹಿರಿಯ ಭರತನಾಟ್ಯ ಗುರು ಉಳ್ಳಾಲ ಮೋಹನ ಕುಮಾರ್ ಚಾಲನೆ ನೀಡಿದರು. ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸತ ಹಿರಿಯ ನೃತ್ಯಗುರುಗಳಾದ ರಾಜಶ್ರೀ ಶೆಣೈ, ಶಾರದಾಮಣಿ ಶೇಖರ್ ಹಾಗೂ ಭರತನಾಟ್ಯ ಕಲಾವಿದೆ, ಯೋಗಸಾಧಕಿ ಸ್ವರೂಪ್ ದೇವಯ್ಯ ಅತಿಥಿಗಳಾಗಿದ್ದರು.
ಹಿಮ್ಮೇಳದಲ್ಲಿ ರಾಧಿಕಾ ಶೆಟ್ಟಿ (ನಟುವಾಂಗ), ನಂದಕುಮಾರ್ ಉಣ್ಣಿಕೃಷ್ಣನ್ (ಹಾಡುಗಾರಿಕೆ), ಜನಾರ್ದನ್ ರಾವ್ (ಮೃದಂಗ), ನಿತೀಶ್ ಅಮ್ಮಣ್ಣಾಯ (ಕೊಳಲು) ಇದ್ದರು. ಅದಿತಿ ಮಂಗಳೂರಿನ ಹಿರಿಯ ವೈದ್ಯ ಡಾ.ಕಿರಣ್ ಕುಮಾರ್ ಬಿ.ಎಸ್ & ಡಾ.ಚೈತ್ರಲಕ್ಷ್ಮೀ ದಂಪತಿ ಪುತ್ರಿ.