ಮದ್ದೂರು: ತಾಲೂಕಿನ ಚಾಪರದೊಡ್ಡಿ ಗ್ರಾಮದಲ್ಲಿ ಬುಧವಾರ ಶ್ರೀ ಬನ್ನಿಮರದ ಆದಿಪರಾಶಕ್ತಿ ಅಮ್ಮನವರ 94ನೇ ವರ್ಷದ ಗಿಂಡಿ ಉತ್ಸವ ವೈಭವದಿಂದ ನಡೆಯಿತು.
ಗಿಂಡಿ ಉತ್ಸವದ ಅಂಗವಾಗಿ ದೇಗುದಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ರಾತ್ರಿ 9 ಗಂಟೆಗೆ ಗ್ರಾಮದೇವತೆಗಳಾದ ಮಲೆಮಹದೇಶ್ವರ ಹುಲಿವಾಹನ, ಅಮ್ಮನವರ ಸಿಂಹವಾಹನ ಮತ್ತು ಮಂಟೆಸ್ವಾಮಿ ಕಂಡಾಯ ಮೆರವಣಿಗೆಯ ಸಮೇತ ಮೀಸಲು ನೀರು ತರಲಾಯಿತು. ರಾತ್ರಿ 11 ಗಂಟೆಗೆ ಅಮ್ಮನವರಿಗೆ ಸೋಗಲು ಸೇವೆ ಅದ್ದೂರಿಯಾಗಿ ನೆರವೇರಿತು.
ಮಂಗಳವಾರ ರಾತ್ರಿ 4 ಗಂಟೆಯಿಂದ ಬೆಳಗಿನ ಜಾವ 7 ಗಂಟೆಯವರೆಗೆ ಗಿಂಡಿ ಉತ್ಸವ ಗ್ರಾಮದೇವತೆಗಳ ಪೂಜಾ ತಮಟೆ ವಾದ್ಯಗಳು ಸದ್ದಿನ ಮೂಲಕ ಗ್ರಾಮದ ಸುತ್ತ ಮೆರವಣಿಗೆ ನಡೆಸಯಲಾಯಿತು. ಗಿಂಡಿ ಉತ್ಸವದ ಅಂಗವಗಿ ಸಹಸ್ರಾರು ಭಕ್ತಾದಿಗಳಿಗೆ ದೇಗುಲದ ಆವರಣದಲ್ಲಿ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.