ಮೈಸೂರು: ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಮಾವುತರು ಮತ್ತು ಕಾವಾಡಿಗಳು ಅ. 7ರಂದು ತಮ್ಮ ಕುಟುಂಬ ಹಾಗೂ ಆನೆಗಳೊಂದಿಗೆ ನಾಡಿನಿಂದ ಕಾಡಿನತ್ತ ಪಯಣ ಬೆಳೆಸಲಿದ್ದಾರೆ.
7ರಂದು ಬೆಳಗ್ಗೆ 9.30 ರಿಂದ 10 ಗಂಟೆ ನಡುವೆ ಅರಣ್ಯ ಇಲಾಖೆ ಹಾಗೂ ಅರಮನೆ ಮಂಡಳಿ ವತಿಯಿಂದ ಗಜಪಡೆಗೆ ಪೂಜೆ ನಡೆಯಲಿದೆ. ಬಳಿಕ ಲಾರಿಗಳ ಮೂಲಕ ಆನೆಗಳನ್ನು ಕ್ಯಾಂಪ್‌ಗಳಿಗೆ ಕಳುಹಿಸಲಾಗುತ್ತದೆ.
ಜತೆಗೆ, ಲಕ್ಷ್ಮೀ ಹಾಗೂ ಮರಿ ಆನೆಯನ್ನೂ ಕ್ಯಾಂಪ್‌ಗೆ ಕಳುಹಿಸಲು ಅರಣ್ಯ ಇಲಾಖೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ.