ಜಿಲ್ಲೆ

ಆದಿನಾಥರ ಪಲ್ಲಕಿ ಉತ್ಸವ

ಬಾಬುರಾವ ಯಡ್ರಾಮಿ


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಅಸಂಖ್ಯಾತ ಸೂಕ್ಷಾö್ಮಣು ಜೀವರಾಶಿಗಳಿಗೆ ಮಾನವ ಜನ್ಮದಲ್ಲಿ ತಿಳಿದು ಅಥವಾ ತಿಳಿಯದೋ ತೊಂದರೆ, ನೋವು ನೀಡಿದರೆ ಬಹಿರಂಗ ಕ್ಷಮೆ ಕೇಳುವುದೇ ಕ್ಷಮಾವಳಿ ಪರ್ವದ ವಿಶೇಷ ಎಂದು ಪರಮಪೂಜ್ಯ ಶ್ರೀ ವಿದ್ಯಾಭೂಷಣ ಮುನಿ ಮಹಾರಾಜ ಹೇಳಿದರು.
ಗಾಜಿಪುರ ಜೈನ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಚಾತುರ್ಮಾಸ್ಯದ ದಶಲP್ಷÀಣ ಪರ್ವದ P್ಷÀಮಾವಳಿ ಪರ್ವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬರೂ ಜೀನ ಭಗವಂತರಲ್ಲಿ ಪ್ರಾರ್ಥಿಸಿ ಮಳೆ-ಬೆಳೆ ಸಮೃದ್ಧವಾಗಲಿ, ರೈತರು ಏಳಿಗೆ ಹೊಂದಲಿ. ಜೈನ ಧರ್ಮಕ್ಕಾಗಿಯೇ ಮುನಿಗಳು ಸೀಮಿತವಲ್ಲ. ಜಗತ್ತಿನಾದ್ಯಂತ ಅಹಿಂಸೆ ಮತ್ತು ಶಾಂತಿ ಮಾರ್ಗದಲ್ಲಿ ನಡೆಯುವ ಪ್ರತಿಯೊಬ್ಬರೂ ಜೈನ ಧರ್ಮದವರು ಎಂದರು.
ಬೆಳಗ್ಗೆ ಆದಿನಾಥ ಭಗವಂತರಿಗೆ ಪಂಚಾಮೃತ ಅಭಿಷೇಕ, ಮುನಿಗಳ ಆಹಾರಚರ್ಯ ನೆರವೇರಿತು. ಗಾಜಿಪುರ ಜೈನ ಮಂದಿರದಿAದ ಆರಂಭವಾದ ಪಲ್ಲಕ್ಕಿ ಮೆರವಣಿಗೆ ಕಪಡಾ ಬಜಾರ್, ಭಾಂಡೆ ಬಜಾರ್ ಮೂಲಕ ಮಂದಿರವರೆಗೆ ಅದ್ದೂರಿಯಾಗಿ ಸಾಗಿತು. ವಿವಿಧ ವಾದ್ಯಗಳು ಮೆರವಣಿಗೆ ಮೆರುಗು ಹೆಚ್ಚಿಸಿದವು.
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ಸುರೇಶ ಎಸ್.ತಂಗಾ, ಸಮಾಜದ ಹಿರಿಯರು, ಮುಖಂಡರು, ಶ್ರಾವಕ ಶ್ರಾವಕಿಯರು, ಮಹಿಳಾ ಮಂಡಳದವರು ಇತರರಿದ್ದರು.