raichur 
ಜಿಲ್ಲೆ

‘ಆದಿಲ್ ಶಾಹಿ’’ ನಾಟಕ ಕೃತಿ ಬಿಡುಗಡೆ ಆದಿಲ್‌ಶಾಹಿಗಳ ಕುರುಹುಗಳು ಇಂದಿಗೂ ಕಾಣಿಸುತ್ತವೆ

 ರಾಯಚೂರು ಆದಿಲ್‌ಶಾಹಿಗಳು ಆಡಳಿತ ನಡೆಸಿದ ಪ್ರದೇಶಗಳಲ್ಲಿ ಇಂದಿಗೂ ಅವರ ಅಭಿವೃದ್ಧಿಯ ಕುರುಹುಗಳು ಕಾಣಿಸುತ್ತವೆ. ಕೆಲವಷ್ಟು ಇತಿಹಾಸ ಪೆಟ್ಟಿಗೆಗಳಲ್ಲೇ ಹುದುಗಿ ಹೋಗಿದೆ. ಅದನ್ನು ಆಳವಾಗಿ ಅಧ್ಯಯನ ಮಾಡುವ ಅಗತ್ಯವಿದೆಂದು ಹಿರಿಯ ಸಾಹಿತಿ ಎ.ಎಲ್.ನಾಗೂರು ಹೇಳಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಲೇಖಕ ಬಶೀರ್ ಅಹ್ಮದ್ ಹೊಸಮನಿ ಅವರ ‘‘ಆದಿಲ್ ಶಾಹಿ’’ ನಾಟಕ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಜಲ ಸಂರಕ್ಷಣೆ, ನೀರಾವರಿ ಹಾಗೂ ಕಟ್ಟಡ ವಿನ್ಯಾಸಕ್ಕೆ ಆದಿಲ್‌ಶಾಹಿ ಅರಸು ನೀಡಿದ ಕೊಡುಗೆಯನ್ನು ಮರೆಯಲಾಗದು. ಆದಿಲ್‌ಶಾಹಿಗಳು ಆಡಳಿತ ನಡೆಸಿದ ಪ್ರದೇಶಗಳಲ್ಲಿ ಇಂದಿಗೂ ಅವರ ಅಭಿವೃದ್ಧಿಯ ಕುರುಹುಗಳು ಕಾಣಸಿಗುತ್ತವೆ. ಕೆಲವಷ್ಟು ಇತಿಹಾಸ ಪೆಟ್ಟಿಗೆಗಳಲ್ಲೇ ಹುದುಗಿ ಹೋಗಿದೆ. ಅದನ್ನು ಆಳವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಅದಿಲ್ ಶಾಹಿ ಅರಸರ ಆಡಳಿತದಲ್ಲಿ ಪರ್ಷಿಯನ್ , ದಖನಿ ,ಅರೆಬಿಕ್ ಭಾಷೆಗಳು ಬೆಳವಣಿಗೆ ಹೊಂದಿದವು ಎಂದರು.

ಹಿರಿಯ ಚಿತ್ರಕಲಾವಿದ ಎಚ್.ಎಚ್.ಮ್ಯಾದಾರ ಮಾತನಾಡಿ, ಸೃಷ್ಟಿ ನಿರ್ಮಾಣವಾದ ಮೇಲೆ ಸಂವೇದನೆಯೇ ಸಂವಹನವಾಯಿತು. ಕಲೆ ಬದುಕಿನ ಭಾಷೆ ಆಯಿತು. ನಂತರ ಮಾತು, ಅಕ್ಷರ ತದನಂತರ ಸಾಹಿತ್ಯ ಹುಟ್ಟಿಕೊಂಡಿತು. ಇಂದು ಕಲೆ ವಿಶ್ವ ಭಾಷೆಯಾಗಿದೆ. ನಾಡಕಲೆ, ರಂಗ ಕಲೆ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ. ಬಶೀರ್ ಅಮ್ಮದ್ ಅವರು ಕಲಾವಿದರಾಗಿ, ಕಾರ್ಯನಿರ್ವಹಿಸಿದ್ದಾರೆ. ನಾಡಿನ ಸಂಸ್ಕೃತಿ, ಭಾಷೆ ಉಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ವಹಿಸಿಕೊಂಡಿರುವ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ವೀರಹನುಮಾನ, ರವೀಂದ್ರ ಎಸ್.ಬಂಡಿ, ಕನ್ನಡ ಮಿತ್ರಕೂಟದ ಅಧ್ಯಕ್ಷ ಅಶೋಕಕುಮಾರ ಜೈನ್ , ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ರಫೀಕ್ ಅಹ್ಮದ್, ಆರ್ಟ ಆಫ್ ಲಿವಿಂಗ್ ಸಂಸ್ಥೆಯ ಯೋಗ ಗುರು ಮಲ್ಲಿಕಾರ್ಜುನ ಸ್ವಾಮಿ, ಜಾನ್‌ವೆಸ್ಲಿ, ಪ್ರವೀಣರೆಡ್ಡಿ ಗುಂಜಹಳ್ಳಿ ,ಕೃತಿ ಕರ್ತೃ ಬಶೀರ್ ಅಹ್ಮದ ಹೊಸಮನಿ , ಪರ್ವೀನ್ ಬೇಗಂ ಹೊಸಮನಿ , ರಫೀಕ್ ಅಹ್ಮದ , ಹೊಸಮನಿ ಪ್ರಕಾಶನದ ಕೋಶಾಧ್ಯಕ್ಷೆ ಖುಷಿಬಾ ಹೊಸಮನಿ, ರಾಮಣ್ಣ ಮ್ಯಾದಾರ್, ಈರಣ್ಣ ಬೆಂಗಾಲಿ ಸೇರಿ ಅನೇಕರು ಇದ್ದರು.