ಜಿಲ್ಲೆ

ನೇಹಾ, ಅಂಜಲಿ ಮನೆಗೆ ಎಡಿಜಿಪಿ ಭೇಟಿ

ಮರಿದೇವ ಹೂಗಾರ

ಹುಬ್ಬಳ್ಳಿ: ಮೃತ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಮನೆಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್. ಹಿತೇಂದ್ರ ಅವರು ಭಾನುವಾರ ಭೇಟಿ ನೀಡಿ ಚರ್ಚಿಸಿದರು. ಕುಟುಂಬದವರಿಂದ ಕೆಲ ಮಾಹಿತಿ ಪಡೆದ ಹಿತೇಂದ್ರ ಅವರು, ಸಾಂತ್ವನ ಹೇಳಿ ಹೊರಬಂದರು. ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಧಾರವಾಡ ಎಸ್‌ಪಿ ಡಾ. ಗೋಪಾಲ ಬ್ಯಾಕೋಡ, ಬೆಳಗಾವಿ ವಿಭಾಗದ ಐಜಿಪಿ ವಿಕಾಸ ಕುಮಾರ ಇತರರು ಇದ್ದರು.