ಬೆಂಗಳೂರು: ರಾಜ್ಯ ಗುಪ್ತ ದಳದ ನಿರ್ದೇಶಕ, ಎಡಿಜಿಪಿ ಕೆ.ವಿ. ಶರತ್‌ಚಂದ್ರ ಅವರ ತಾಯಿ ಕೆ.ಪಿ. ಶಾರದಮ್ಮ (81) ಮಂಗಳವಾರ ನಿಧನರಾದರು.
ಹಾಸನ ಜಿಲ್ಲೆ ಕೊಣನೂರು ಮೂಲದ ಶಾರದಮ್ಮ ಅವರು ಪತಿ ನಿವೃತ್ತ ಐಎಫ್ಎಸ್ ಅಧಿಕಾರಿ ಕೆ.ವಿ.ಕೆ. ಶೆಟ್ಟಿ ಮತ್ತು ಪುತ್ರ ಶರತ್ ಚಂದ್ರ ಸೇರಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಾರದಮ್ಮ, ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಧ್ಯಾಹ್ನ 12 ಗಂಟೆಯಲ್ಲಿ ಮೃತರಾಗಿದ್ದಾರೆ.
ಪ್ರಶಾಂತ್‌ನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಗೃಹ ಸಚಿವ ಡಾ. ಜಿ. ಪರಮೇಶ್ವರ, ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವರಾದ ಸೋಮಣ್ಣ, ಉಮಾಶ್ರೀ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ, ಡಿಜಿ-ಐಜಿಪಿ ಡಾ. ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಸೇರಿ ಹಲವು ಅಧಿಕಾರಿಗಳು ಮೃತರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ಸುಮನಹಳ್ಳಿಯ ಚಿತಾಗಾರದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು.