ಜಿಲ್ಲೆ

ಮಕ್ಕಳ ಸಾಧನೆಗೆ ಸೂಕ್ತ ಅವಕಾಶ ಅಗತ್ಯ

ಲಕ್ಷ್ಮೇಶ್ವರ: ಮಕ್ಕಳಿಗೆ ಸೂಕ್ತ ಅವಕಾಶ ನೀಡಿದಾಗ ಮಾತ್ರ ಅವರಲ್ಲಿ ಆತ್ಮಸ್ಥೆರ್ಯ ಇಮ್ಮಡಿಗೊಂಡು ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯಕ ಹೇಳಿದರು.

ಸರ್ಕಾರಿ ಪ್ರೌಢಶಾಲೆ ಯಲ್ಲಾಪುರದಲ್ಲಿ ಫು ಬಡ್ನಿ, ಬಟ್ಟೂರ ಮತ್ತು ದೊಡ್ಡೂರ ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ರೀತಿ-ನೀತಿಗಳು ಮತ್ತು ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಮಕ್ಕಳಲ್ಲಿ ಈ ಗುಣಗಳನ್ನು ಬೆಳೆಸುವ ಪಠ್ಯಕ್ರಮ ರೂಪುಗೊಳ್ಳಬೇಕಾಗಿದೆ ಎಂದರು.

ನೋಡಲ್ ಅಧಿಕಾರಿ ಈಶ್ವರ ಮೇಡ್ಲೇರಿ ಮಾತನಾಡಿದರು. ಮುಖ್ಯೋಪಾಧ್ಯಾಯ ಗಾಯಕವಾಡ, ಸಿಆರ್‌ಪಿ ಗಿರೀಶ ನೇಕಾರ, ಶಿವಾನಂದ ಅಸುಂಡಿ ಮತ್ತು ನವೀನ ಅಂಗಡಿ ಬಹುಮಾನ ವಿತರಿಸಿದರು. ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮಂಜಣ್ಣ ಅಂಗಡಿ, ಎಂ.ಬಿ. ಹೊಸಮನಿ, ಎಚ್.ಎಂ. ಗುತ್ತಲ, ಎಸ್.ಡಿ. ಲಮಾಣಿ, ವಿ.ಎಚ್. ದೀಪಾಳಿ, ಸಿಆರ್‌ಪಿಗಳಾದ ಗಿರೀಶ ನೇಕಾರ, ಶಿವಾನಂದ ಅಸುಂಡಿ, ನವೀನ ಅಂಗಡಿ, ಎಂ.ಎಸ್. ಹಿರೇಮಠ, ಎಸ್.ಬಿ. ಲಕ್ಷ್ಮೇಶ್ವರ, ಎಸ್.ಎಂ. ಮಲ್ಲಣ್ಣವರ, ಮಾಂತಗೌಡ್ರ ಪಾಟೀಲ,ಫಕೀರಗೌಡ್ರ ಭರಮಗೌಡ್ರ, ಫಕೀರೇಶ ಕಟಗಿ, ಶಿವಪುತ್ರಪ್ಪ ಲಮಾಣಿ, ಶಂಕ್ರಪ್ಪ ಲಮಾಣಿ, ರಾಮಚಂದ್ರಪ್ಪ ಲಮಾಣಿ, ಶಿವಪುತ್ರಪ್ಪ ಲಮಾಣಿ, ನಿವೃತ್ತ ಶಿಕ್ಷಕರಾದ ಎನ್.ಎಸ್. ಬೀರಬ್ಬಿ ಇದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಪಿ.ಆರ್. ನಡುವಿನಹಳ್ಳಿ, ಎನ್.ಎನ್. ಶಿಗ್ಲಿ ಹಾಗೂ ಪ್ರೇಮಕ್ಕ ಅಂಗಡಿಯವರನ್ನು ಸನ್ಮಾನಿಸಲಾಯಿತು. ಎಂ.ಎಚ್. ದಿಂಡವಾಡ ಸ್ವಾಗತಿಸಿದರು, ಎಸ್.ಸಿ. ಹಾವೇರಿ ವಂದಿಸಿದರು. ಸಂಗಮೇಶ ಅಂಗಡಿ ನಿರೂಪಿಸಿದರು.