ಸಿಂಧನೂರಿನಲ್ಲಿ ನೀರಾವರಿ ಇಲಾಖೆ ಅಧೀಕ್ಷಕ ಶಿವಕುಮಾರಗೆ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಶುಕ್ರವಾರ ಮನವಿ ಸಲ್ಲಿಸಿತು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ, ಜಿಲ್ಲಾಧ್ಯಕ್ಷ ರಾಮಯ್ಯ ಜವಳಗೇರಾ, ತಾಲೂಕು ಗೌರವಾಧ್ಯಕ್ಷ ಪರಯ್ಯಸ್ವಾಮಿ, ತಾಲೂಕು ಅಧ್ಯಕ್ಷ ನಾಗಪ್ಪ ಬೂದಿವಾಳ, ಪ್ರಮುಖರಾದ ಟಿ.ರಾಮಕೃಷ್ಣ, ಕೆ.ವೆಂಕಣ್ಣ ಇತರರಿದ್ದರು. 
ಜಿಲ್ಲೆ

ಸಮರ್ಪಕ ಗೇಜ್ ನಿರ್ವಹಣೆ ಮಾಡಿ

Kopala - Desk - Eraveni

ಸಿಂಧನೂರು: ತಾಲೂಕಿನಲ್ಲಿ ಭತ್ತ ನಾಟಿ ಆರಂಭಗೊಂಡಿದ್ದು, ಎಲ್ಲ ಉಪಕಾಲುವೆಯಲ್ಲಿ ಸಮರ್ಪಕ ಗೇಜ್ ನಿರ್ವಹಣೆ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಶುಕ್ರವಾರ ನೀರಾವರಿ ಇಲಾಖೆ ಅಧೀಕ್ಷಕ ಶಿವಕುಮಾರಗೆ ಮನವಿ ಸಲ್ಲಿಸಿತು.

ತಾಲೂಕು ವ್ಯಾಪ್ತಿಯಲ್ಲಿ ಕಳೆದ ವಾರದಿಂದ ಭತ್ತ ನಾಟಿ ಕಾರ್ಯ ಜೋರಾಗಿದ್ದು ಜಲಾಶಯದಲ್ಲಿ ನೀರಿನ ಸಂಗ್ರಹವಿದೆ. ಸಲಹಾ ಸಮಿತಿ ತಪ್ಪು ನಿರ್ಧಾರದಿಂದ ನದಿಗೂ ಲಕ್ಷಾಂತರ ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿಯುತ್ತಿದೆ.

ಕಾಲುವೆಗಳಿಗೆ ಮಾತ್ರ ನಿರ್ಬಂಧ ಹಾಕಿ ಹಂತ ಹಂತವಾಗಿ ನೀರು ಹೆಚ್ಚಳ ಮಾಡುವುದಾಗಿ ತೀರ್ಮಾನಿಸಲಾಗಿದೆ. ಈಗ ಸಮರ್ಪಕ ಗೇಜ್ ನಿರ್ವಹಣೆ ಆಗುತ್ತಿಲ್ಲವಾಗಿದ್ದರಿಂದ ರೈತರು ಭತ್ತ ನಾಟಿಗೆ ಪರದಾಡುವಂತಾಗಿದೆ. ಕೆಳ ಭಾಗಕ್ಕೂ ಸಮರ್ಪಕ ನೀರು ತಲುಪುತ್ತಿಲ್ಲ.

ಉಪಕಾಲುವೆಗಳಲ್ಲಿ ಯಥೇಚ್ಛವಾಗಿ ಹೂಳು ತುಂಬಿದೆ. ಬೂದಿವಾಳ ಸೀಮಾದಲ್ಲಿ ಕಾಲುವೆ ಸ್ವಚ್ಛಗೊಳಿಸಿಲ್ಲ. 54ನೇ ಉಪಕಾಲುವೆ ಕೊನೇ ಭಾಗಕ್ಕೆ ಪ್ರತಿ ವರ್ಷ ನೀರು ತಲುಪುತ್ತಿಲ್ಲ. ಈ ಭಾಗದಲ್ಲಿ ಮುಂಗಾರು ಮಳೆಗೆ ಹತ್ತಿ, ಸೂರ್ಯಪಾನ, ಸಜ್ಜೆ ಬೆಳೆ ಹಾಕಿಕೊಂಡಿದ್ದು ಈಗ ನೀರಿನ ಕೊರತೆ ಎದುರಾಗಿದೆ. ನೀರು ತಲುಪಿಸುವ ವ್ಯವಸ್ಥೆಯಾಗಬೇಕಿದೆ.

ಮಸ್ಕಿ ನಾಲಾ(ಮಾರಲದಿನ್ನಿ ಡ್ಯಾಂ) ಎಡದಂಡೆ ಮತ್ತು ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಕಳಪೆಯಾಗಿದ್ದು, ಕಾಲುವೆ ಪಕ್ಕದಲ್ಲಿ ರಸ್ತೆ ನಿರ್ಮಿಸಿಲ್ಲ. ಅಲ್ಲಲ್ಲಿ ಸಿಡಿ ಕೂಡ ಮಾಡಿಲ್ಲ. ಕೂಡಲೇ ಈ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಒತ್ತಾಯಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ಮರಳಿ, ಜಿಲ್ಲಾಧ್ಯಕ್ಷ ರಾಮಯ್ಯ ಜವಳಗೇರಾ, ತಾಲೂಕು ಗೌರವಾಧ್ಯಕ್ಷ ಪರಯ್ಯಸ್ವಾಮಿ, ತಾಲೂಕು ಅಧ್ಯಕ್ಷ ನಾಗಪ್ಪ ಬೂದಿವಾಳ, ಪ್ರಮುಖರಾದ ಟಿ.ರಾಮಕೃಷ್ಣ, ಕೆ.ವೆಂಕಣ್ಣ, ರಮೇಶ, ಎನ್.ಸತ್ಯನಾರಾಯಣ, ಯಂಕನಗೌಡ, ಭೀಮಣ, ಕಲ್ಲಪ್ಪ ತುರಕಟ್ಟಿಕ್ಯಾಂಪ್, ಬಿಕಾಸ್ ಅಧಿಕಾರಿ, ಪ್ರವೀರ್, ರಂಜೀತ್, ಅಜೀತ್ ಕಾಯಿನ್ ಇದ್ದರು.