ಜಿಲ್ಲೆ

ಜಿಲ್ಲೆಗೆ ಅವಶ್ಯಕ ಸಮರ್ಪಕ ಬಸ್‌ಗಳ ವ್ಯವಸ್ಥೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಜಿಲ್ಲೆಯ ಜನರಿಗೆ ಸೂಕ್ತ ಸಮಯಕ್ಕೆ ಹಳ್ಳಿಗಳಿಗೆ ಪ್ರಯಾಣಿಸಲು ಸಮಪರ್ಕವಾದ ಬಸ್‌ಗಳೆ ವ್ಯವಸ್ಥೆ ಹೊರತು ವಿಮಾನಗಳು ಅಲ್ಲ ಎಂದು ಸಿಎಂ ಸಲಹೆಗಾರ ಬಿ.ಆರ್. ಪಾಟೀಲ್ ಹೇಳಿದರು.

ನಗರದ ರಾಘವ ಕಲಾ ಮಂದಿರಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶನಿವಾರ ನಡೆದ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ನೀರಾವರಿ ಪ್ರದೇಶದ 800 ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣದ ಅವಶ್ಯಕತೆಯಿದೆ ಎಂಬುದಾಗಿ ರೈತರು ಹಾಗೂ ಸಾರ್ವಜನಿಕರಾಗಲಿ ಅರ್ಜಿ ಹಾಕಿದ್ದಾರೆಯೇ ಎಂದು ಪ್ರಶ್ನಿಸಿದರು. ಫಲವತ್ತಾದ ಜಮೀನಿನಲ್ಲಿ ವಿಮಾನ ನಿಲ್ದಾಣ ಯಾರಿಗೂ ಅವಶ್ಯಕತೆಯಿಲ್ಲ ಸಮರ್ಪಕವಾಗಿ ಅವಶ್ಯಕತೆಯಾಗಿರುವುದು ಮೂಲಸೌಕರ್ಯಗಳು ಮಾತ್ರ ಎಂದು ಹೇಳಿದರು.

ರಾಜ್ಯ ಸರ್ಕಾರ ರೈತರೊಂದಿಗೆ ವ್ಯವಹಾರ ಮಾಡಬಾರದು. ಮಾಡಿದರೆ ಜನರು ಹಾಗೂ ಸರ್ಕಾರ ಉಳಿಯಲು ಸಾಧ್ಯವಿಲ್ಲ. ಈ ಪ್ರದೇಶದ ಜನರ ಅಗತ್ಯತೆಗಳನ್ನು ಮೊದಲು ಪೂರೈಸಲಿ. ಕೇವಲ ರಿಯಲ್ ಎಸ್ಟೇಟ್ ಬೆಳವಣಿಗೆಗಾಗಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಈ ರೀತಿಯ ನಿರ್ಧಾರಗಳು ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದರು.

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ರೈತರು ನಗರದ ದುರ್ಗಮ್ಮ ದೇವಸ್ಥಾನದಿಂದ ರಾಘವ ಕಲಾ ಮಂದಿರದ ವರೆಗೆ ಮೆರವಣಿಗೆ ನಡೆಸಿ ರೈತ ಗೀತೆಗಳು ಹಾಡಿದರು.