ಬೈಲಹೊಂಗಲ: ತಾಲೂಕಿನ ಸಂಪಗಾಂವ ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಪಡೆ ನೇತತ್ವದಲ್ಲಿ ಮಂಗಳವಾರ ಗ್ರಾಮಸ್ಥರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಸಂಟನೆಯ ಸಂಪಗಾವ ಟಕದ ಅಧ್ಯ ಮಂಜುನಾಥ ಉಳವಿ ಮಾತನಾಡಿ, ಸಾರ್ವಜನಿಕರಿಗೆ ಸಮರ್ಪಕ ಬಸ್ ಸೇವೆ ಇಲ್ಲದೆ ಬಹಳ ತೊಂದರೆ ಆಗುತ್ತಿದೆ. ಗಂಟೆಗಟ್ಟಲೇ ಬಸ್ ನಿಲ್ದಾಣದಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಸಂಪಗಾಂವ ವಿದ್ಯಾರ್ಥಿಗಳು ಬೆಲಹೊಂಗಲ ಹಾಗೂ ಬೆಳಗಾವಿ ಶಾಲಾ&ಕಾಲೇಜಿಗಳಿಗೆ ತೆರಳುತ್ತಿದ್ದು, ಬಸ್ ಜನರಿಂದ ತುಂಬಿ ಬರುತ್ತಿವೆ. ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಸಂಪಗಾಂವ ಸುತ್ತಲಿನ ಪಟ್ಟಿಹಾಳ, ನೇಗಿನಹಾಳ, ಯರಗೊಪ್ಪ, ಬಾವಿಹಾಳ, ಯರಗುದ್ದಿ, ಹಣ್ಣಿಕೇರಿ, ನಾಗನೂರ ಗ್ರಾಮಗಳ ವಿದ್ಯಾರ್ಥಿಗಳಿಗೆ ತಡೆರಹಿತ ಬಸ್ ನೀಡಬೇಕು. ಬೆಲಹೊಂಗಲದಿಂದ ಹಿರೇಬಾಗೇವಾಡಿ ಬಸ್ ಪುನಾರಂಭಿಸಲು ಒತ್ತಾಯಿಸಿದರು. ನಿಂಗಪ್ಪ ಬಾರ್ಕಿ, ಶಿವರಾಜ ನಂದೆನ್ನವರ, ಶಿವು ತಲೆವಡಕನವರ, ಗಿರೀಶ ಬಾರ್ಕಿ, ವಾಸು ತೋರಣಗಟ್ಟಿ, ಶ್ರೀಶೆಲ ಉಳ್ಳೆಗಡ್ಡಿ ಇತರರಿದ್ದರು.