ಬಿಸಿಎಂ ಹಾಸ್ಟೆಲ್‌ಗಳ ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ರಾಜ್ಯ ಸಂಯುಕ್ತ ವಸತಿ ನಿಲಯಗಳ ಕಾರ್ಮಿಕ ಸಂಘದಿಂದ ಮಂಗಳವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುರೇಶ್ ಬಾಬು ಅವರಿಗೆ ಮನವಿ ಸಲ್ಲಿಸಲಾಯಿತು. ಐಯುಟಿಯುಸಿ ಜಿಲ್ಲಾಧ್ಯಕ್ಷ ಎ.ದೇವದಾಸ್, ಡಾ.ಪ್ರಮೋದ್, ಸುರೇಶ್.ಜಿ ಇತರರಿದ್ದರು.  
ಜಿಲ್ಲೆ

ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿ

ಬಳ್ಳಾರಿ : ಬಿಸಿಎಂ ಹಾಸ್ಟೆಲ್‌ಗಳ ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ರಾಜ್ಯ ಸಂಯುಕ್ತ ವಸತಿ ನಿಲಯಗಳ ಕಾರ್ಮಿಕ ಸಂಘದಿಂದ ಮಂಗಳವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸುರೇಶ್ ಬಾಬು ಅವರಿಗೆ ಮನವಿ ಸಲ್ಲಿಸಲಾಯಿತು.

ಹಿಂದುಳಿದ ವರ್ಗಗಳ ಇಲಾಖೆಗಳ ಹಾಸ್ಟೆಲ್‌ಗಳಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ಕಾರ್ಮಿಕರಿಗೆ ಇಲಾಖೆಯ ಪರಿಷ್ಕೃತ ವೇತನದ ಸರ್ಕಾರದ ಆದೇಶವನ್ನು (ನವೆಂಬರ್ 30, 2022) ಕೂಡಲೇ ಜಾರಿಗೆ ತರಬೇಕು. ಹೆಚ್ಚಿಸಿದ ವೇತನದ ಹಿಂಬಾಕಿ, ಎಲ್ಲ ವಸತಿ ನಿಲಯಗಳ ಹೊರಗುತ್ತಿಗೆ ಕಾರ್ಮಿಕರಿಗೆ ನೀಡಬೇಕು. ಹೊರಗುತ್ತಿಗೆ ಕಾರ್ಮಿಕರಿಗೆ ಹಿಂದಿನ ಏಜೆನ್ಸಿಗಳಿಂದ ಬರಬೇಕಾದ ಪಿ.ಎಫ್ ಹಣವನ್ನು ವಸೂಲಿ ಮಾಡಲು ತುರ್ತು ಕ್ರಮ ಕೈಗೊಳ್ಳಬೇಕು. ಹೊರಗುತ್ತಿಗೆ ಕಾರ್ಮಿಕರಿಗೆ ತಿಂಗಳ ಮೊದಲ ವಾರದಲ್ಲಿ ವೇತನ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಕಾರ್ಮಿಕ ಕಾಯ್ದೆ ಅನ್ವಯ ತಿಂಗಳಿಗೆ ನಾಲ್ಕು ರಜೆ ಸೌಲಭ್ಯಗಳು, ನೇಮಕಾತಿ ಆದೇಶ, ಗುರುತಿನ ಚೀಟಿ, ವೇತನ ಚೀಟಿ, ಇಎಸ್‌ಐ ಕಾರ್ಡ್ ನೀಡಬೇಕು
ರಜೆಯ ದಿನ ಕಾರ್ಯನಿರ್ವಹಿಸಿದರೆ ದುಪ್ಪಟ್ಟು ವೇತನ ನೀಡಬೇಕು. ಮೂರು ತಿಂಗಳಿಂದ ಬಾಕಿಯಿರುವ ಮಾಸಿಕ ವೇತನವನ್ನು ನೀಡಲು ಕೂಡಲೇ ಕ್ರಮಕೈಗೊಬೇಕು ಎಂದು ಮನವಿ ಮಾಡಿದರು.

ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ.ದೇವದಾಸ್, ಡಾ.ಪ್ರಮೋದ್, ಸುರೇಶ್.ಜಿ ಮತ್ತಿತರ ಕಾರ್ಮಿಕರ ಮುಖಂಡರು ಭಾಗವಹಿಸಿದ್ದರು.