ಜಿಲ್ಲೆ

ಅಡ್ಡೊಳೆಯಲ್ಲಿ ಕಾರು, ಬಸ್ ಡಿಕ್ಕಿ, 7 ಮಂದಿ ಗಂಭೀರ

Dakshina Kannada

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಅಡ್ಡೋಳೆ ಎಂಬಲ್ಲಿ ಶನಿವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ 7 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಪಟ್ರಮೆ ನಿವಾಸಿಗಳಾದ ಮರಿಯಮ್ಮ(58), ಅಜ್ಮೀಯಾ(7), ಮರಿಯಮ್ಮ ಜುಲೈಕಾ(3), ಮಹಮ್ಮದ್ ಅನಾಸ್(13), ಹಂಜ(30), ಮಹಮ್ಮದ್ ಸುಹಾನ್(7), ಮಹಮ್ಮದ್ ಮುರ್ಥ್‌ಲ(16) ಗಾಯಗೊಂಡವರು. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.