ಮಬನೂರ ಗ್ರಾಮದಲ್ಲಿ ಏರ್ಪಡಿಸಿದ್ದ ಅಧ್ಯಾತ್ಮ ಸಪ್ತಾಹದಲ್ಲಿ ಇಂಚಗೇರಿಮಠದ ರೇವಣಸಿದ್ದೇಶ್ವರ ಮಹಾರಾಜರು ಆಶೀರ್ವಚನ ನೀಡಿದರು. ಪಂಚನಗೌಡ ದ್ಯಾಮನಗೌಡರ, ಪುಂಡಲೀಕ ಮೇಟಿ, ಅಶ್ವತ್ಥ ವೈದ್ಯ, ಮಾರುತಿ ಅಪ್ಪಣ್ಣವರ ಇತರರು ಇದ್ದರು. 
ಜಿಲ್ಲೆ

ವ್ಯಸನ ಮುಕ್ತರಾದರೆ ಒಳಿತು

ಪ್ರಶಾಂತ ಹೂಗಾರ

ಮುನವಳ್ಳಿ: ಸಮೀಪದ ಮಬನೂರ ಗ್ರಾಮದ ಮಾಧವಾನಂದ ಆಶ್ರಮದಲ್ಲಿ ಮಂಗಳವಾರ ಮಾಧವಾನಂದ ಪ್ರಭುಜಿ, ಗುರುಪುತ್ರೇಶ್ವರ ಮಹಾರಾಜರ ಹಾಗೂ ಜಗನ್ನಾಥ ಮಹಾರಾಜರ ಸ್ಮರಣಾರ್ಥ ಅಧ್ಯಾತ್ಮ ಸಪ್ತಾಹ ಜರುಗಿತು.

ಇಂಚಗೇರಿಮಠದ ರೇವಣಸಿದ್ದೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿ, ಬದುಕು ನಾಶಗೊಳಿಸುವ ವ್ಯಸನಗಳಿಂದ ಯುವಕರು ಹೊರಬಂದು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಬಸವಾದಿ ಶರಣರು ಹಾಕಿಕೊಟ್ಟ ಸಮಾನತೆಯ ತಳಹದಿ ಮೇಲೆ ವಿಶ್ವಶಾಂತಿ ಕುರಿತು ಚಿಂತಿಸಿದ ಇಂಚಗೇರಿ ಸಾಂಪ್ರದಾಯದ ಸದ್ಗುರು ಮಾಧವಾನಂದ ಪ್ರಭುಜಿ ಸೇವೆ ಅಪಾರ ಎಂದರು.

ಕರೆಪ್ಪ ಮೇಟಿ, ಶಂಕರೆಪ್ಪ ಮಹಾರಾಜರು, ಸಂಗಪ್ಪ ಸಾಲಿ, ಅಶ್ವತ್ಥ ವೈದ್ಯ, ಪುಂಡಲೀಕ ಮೇಟಿ, ನಾಗಪ್ಪ ಬೆಳ್ಳಿವರಿ, ಬಸಪ್ಪ ನೇಗಿನಾಳ, ನಾಗಪ್ಪ ಬೆಳ್ಳಿವರಿ, ರಾಮಚಂದ್ರ ಪಟಾತ, ವಿರೂಪಾಕ್ಷ ನರಿ, ಹನುಮಂತ ಹೊನಕುಪ್ಪಿ, ಉದಯ ನರಿ, ವಿಠ್ಠಲ ಚುಂಚನೂರ, ಪಡೆಪ್ಪ ನರಿ, ವಿಠ್ಠಲ ಅಗಸಿಮನಿ, ಮಾರುತಿ ಅಪ್ಪಣ್ಣವರ, ಮುತ್ತು ಮೇಟಿ, ಶಿವಪ್ಪ ಪಟಾತ, ಮಹಾದೇವ ಮುರಗೋಡ ಇತರರಿದ್ದರು.