ಜಿಲ್ಲೆ

ಮಾದಕ ವ್ಯಸನಗಳ ಅರಿವು ಅಗತ್ಯ : ಧನ್ಯಶ್ರೀ ಅಭಿಪ್ರಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಮಕ್ಕಳು ಮಾನಸಿಕವಾಗಿ ಸದೃಢರಾದಾಗ ದೇಶದ ಆಸ್ತಿಯಾಗುತ್ತಾರೆ. ಸಾಮಾಜಿಕ ಪಿಡುಗುಗಳ ಕುರಿತಾದ ಅರಿವು ಮಕ್ಕಳಿಗೆ ಇರಬೇಕಾಗುತ್ತದೆ. ತನ್ನನ್ನು ತಾನು ರಕ್ಷಿಸಿಕೊಳ್ಳುವುದರ ಜತೆಗೆ ತನ್ನ ಸಹಪಾಠಿಗಳಿಗೆ ತೊಂದರೆಯಾದರೆ ಉಪಯೋಗಕ್ಕೆ ಬರುತ್ತದೆ ಎಂದು ಬಂಟ್ವಾಳ ಟೌನ್ ಆರಕ್ಷಕ ಠಾಣೆ ಹೆಡ್ ಕಾನ್ಟ್ಸೆಬಲ್ ಧನ್ಯಶ್ರೀ ಅಭಿಪ್ರಾಯಪಟ್ಟರು.

ಬ್ರಹ್ಮರಕೂಟ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿಯು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗಾಗಿ ಹಮ್ಮಿಕೊಂಡ ವ್ಯಸನ ಮುಕ್ತ ಜೀವನ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ಮಂಗಳೂರು ಲಿಂಕ್-ಅಮಲು ಚಿಕಿತ್ಸಾ ಸಮಗ್ರ ಪುನರ್ವಸತಿ ಕೇಂದ್ರ ಆಡಳಿತಾಧಿಕಾರಿ ಲಿಡಿಯಾ ಲೋಬೊ ಮಾಹಿತಿ ನೀಡಿದರು.

ಮಕ್ಕಳು ಕುತೂಹಲಕ್ಕಾಗಿ ಚಟಕ್ಕೆ ಆಕರ್ಷಿತರಾಗುತ್ತಾರೆ. ಮಾಹಿತಿ ಕೊರತೆಯಿಂದಾಗಿ ತನಗೆ ಗೊತ್ತಿಲ್ಲದೆ ಬಲಿಯಾಗುತ್ತಾರೆ. ಇರುವ ಜೀವನ ಸಮರ್ಪಕ ಬದುಕಲು ಮಕ್ಕಳಿಗೆ ಮಾಹಿತಿಯ ಅಗತ್ಯವಿದೆ. ಅನೇಕ ಶಾಲೆಗಳಲ್ಲಿ ಮಕ್ಕಳು ಚಟಕ್ಕೆ ಬಲಿಯಾಗಿರುವ ಘಟನೆ ಕಂಡು ಬಂದಿವೆ. ಆದರೆ ಬ್ರಹ್ಮರಕೂಟ್ಲು ಶಾಲೆ ಮಕ್ಕಳಿಗೆ ಮಾಹಿತಿ ನೀಡುವ ಮೂಲಕ ಜೀವನ ಜೋಪಾನ ಮಾಡಲು ಮುಂದಾಗಿರುವುದು ಪ್ರಶಂಸನೀಯ ಎಂದರು.

ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಜ್ಯೋತಿಗುಡ್ಡೆ, ಮುಖ್ಯಶಿಕ್ಷಕಿ ಕಲ್ಯಾಣಿ ಜಿ., ಬಂಟ್ವಾಳ ಟೌನ್ ಸಬ್‌ಇನ್ಸ್‌ಪೆಕ್ಟರ್ ದುರ್ಗಪ್ಪ ಎಚ್.ಕಲಘಟ್ಟಿಗಿ, ಕಾನ್ಸ್ಟೇಬಲ್ ಅಜಯ್ ಕುಮಾರ್, ದತ್ತು ಸ್ವೀಕಾರ ಸಮಿತಿ ಅಧ್ಯಕ್ಷ ಮಧುಸೂದನ್ ಶೆಣೈ ಉಪಸ್ಥಿತರಿದ್ದರು. ಶಿಕ್ಷಕಿ ಮಂಜುಳಾ ರಾವ್ ನಿರೂಪಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ವಿಶ್ವನಾಥ ದರಿಬಾಗಿಲು ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಕಲ್ಯಾಣಿ ಜಿ. ವಂದಿಸಿದರು.