ಜಿಲ್ಲೆ

ಅಡವಿಸೋಮಾಪುರ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ರಮ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಪ್ರತಿಯೊಂದು ಗ್ರಾಮದ ಮನೆಗಳ ಪರಿಸರದಲ್ಲಿ ತಾಜ್ಯ ಹಾಕದೆ ಸ್ವಚ್ಛತೆಯ ಪರಿಸರ ಪರಿಸರವನ್ನು ಹೊಂದಲು ಸಮುದಾಯದ ಪಾಲುದಾರಿಕೆ ಅತಿಮುಖ್ಯವಾಗಿದೆ ಎಂದು ಅಡವಿಸೋಮಾಪುರ ಗ್ರಾಪಂ ಉಪಾಧ್ಯ ಶಾಮಸುಂದರ್​ ಡಂಬಳ ಹೇಳಿದರು.
ಅಡವಿಸೋಮಾಪೂರ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ವಚ್ಛತೆಯೇ ಸೇವೆ ತಾಜ್ಯ ಮುಕ್ತಭಾರತ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮಗಳು ಮತ್ತು ತಾಂಡಾಗಳು ಆರೋಗ್ಯ ಸಂಪತ್ತನ್ನು ಹೊಂದಬೇಕಾದರೆ ಸ್ವಚ್ಛತೆ ಮತ್ತು ಮನೆಗಳ ವೈಯಕ್ತಿಕ ಸ್ವಚ್ಛತೆಗೆ ಜನರು ಆಧ್ಯತೆ ನೀಡಬೇಕು. ಇದರಿಂದ ಗ್ರಾಮವು ಆರೋಗ್ಯ ಸಂಪತ್ತನ್ನು ಹೊಂದಿ ಆಥಿರ್ಕವಾಗಿ ಪ್ರಗತಿಯಲ್ಲಿ ಮುಂದುವರೆಯುತ್ತದೆ. ಆರೋಗ್ಯ ಇಲಾಖೆಯು ನೀಡುವಂತಹ ಇಂತಹ ಜಾಗೃತಿ ಕಾರ್ಯಕ್ರಮಗಳಿಂದ ಗ್ರಾಮಗಳು ಸದುಪಯೋಗ ಪಡೆದುಕೊಳ್ಳ ಬೇಕು ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ರೂಪಸೇನ್​ ಚವ್ಹಾಣ ಮಾತನಾಡಿ,ಅ. 2 ರವರಗೆ ಸ್ವಚ್ಛತೆಯೇ ಸೇವೆ ತಾಜ್ಯ ಮುಕ್ತಭಾರತ ಕಾರ್ಯಕ್ರಮವನ್ನು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಪರಿಸರ ರಕ್ಷಣೆ, ಸಾರ್ವಜನಿಕ ಅರಿವನ್ನು ಮೂಡಿಸಲು ಮಹತ್ಮಾಗಾಂಧಿ ಕನಸು ನನಸು ಮಾಡಲು ಎಲ್ಲರೂ ಸ್ವಚ್ಛತೆಯ ಪರಿಸರ ನಿರ್ಮಾಣಕ್ಕೆ ಭಾಗಿ ಆಗಬೇಕು ಎಂದರು. ಗ್ರಾಮದ ಸ್ವಚ್ಛತೆಗೆ ಎಲ್ಲ ಇಲಾಖೆಗಳು ಜೊತೆಗೂಡಿ ಗ್ರಾಮದಲ್ಲಿ ಪರಿಸರ ರಕ್ಷಣೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ. ಪರಿಸರ ಪರಿಶುದ್ಧತೆಗೆ ಸಾರ್ವಜನಿಕರ ಜವಾಬ್ದಾರಿ ಹೊಂದಬೇಕು ಎಂದು ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಯ ಆವರಣ, ಆರೋಗ್ಯ ಕಟ್ಟಡ ಆವರಣ. ಜನತಾ ಪ್ಲಾಟ್​, ಅಂಗನವಾಡಿ ರಸ್ತೆಯನ್ನು ಸ್ವಚ್ಚತೆಗೊಳಿಸಲಾಯಿತು.
ಆರೋಗ್ಯಧಿಕಾರಿ ಸಿದ್ದಪ್ಪ ಲಿಂಗದಾಳ ಮಾತನಾಡಿದರು. ಚಿದಾನಂದ ಪತ್ತಾರ, ಮಲ್ಲಪ್ಪ ಅಸುಂಡಿ, ಮಹೇಶ ಅಂಗಡಿ, ಸೋಮಪ್ಪ ಪೂಜಾರ, ಲಚ್ಚಪ್ಪ ಲಮಾಣಿ, ಸೀತವ್ವ ರಾಠೋಡ, ಗೀತಾ ಕಾಂಬಳೆ, ಶೀಲಾ ಮಲೇಕರ, ಅಜಯಕುಮಾರ ಕಲಾಲ ಇದ್ದರು.