ಜಿಲ್ಲೆ

ಅಡವೀಂದ್ರ ಸ್ವಾಮಿ ಮಠದಲ್ಲಿ ಪುರಾಣ ಪ್ರವಚನ ಮಾಲಿಕೆ

Gadag - Shivanand Hiremath

ಗದಗ: ಭಕ್ತರಲ್ಲಿ ಭಕ್ತಿಯನ್ನು ಸ್ಪುರಿಸಿ ಧಾರ್ಮಿಕ, ವೈಚಾರಿಕ ಮತ್ತು ಸಾಮಾಜಿಕವಾಗಿ ಜಾಗೃತಿ ಮೂಡಿಸುವುದೇ ಪುರಾಣ ಪ್ರವಚನದ ಮುಖ್ಯ ಉದ್ದೇಶವಾಗಿದೆ ಎಂದು ಡಾ.ರಾಜಗುರು ಗುರುಸ್ವಾಮಿ ಕಲಕೇರಿ ಹೇಳಿದರು.
ಅವರು ಗದುಗಿನ ಅಡವೀಂದ್ರ ಸ್ವಾಮಿ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಎರ್ಪಡಿಸಿದ್ದ ಶ್ರೀದೇವಿ ಪುರಾಣ, ಪ್ರವಚನದಲ್ಲಿ ಹೇಳಿದರು.
ಮನುಷ್ಯನ ಅಜ್ಞಾನದ ಅಂಧಕಾರವನ್ನು ಕಳೆದು ಸುಜ್ಞಾನದ ಬೆಳಕಿನೆಡೆಗೆ ಮುನ್ನಡೆಸುವಲ್ಲಿ ಪುರಾಣ ಪ್ರವಚನಗಳು ರಾಜಮಾರ್ಗವಾಗಿವೆ ಎಂದರು.
ಸಮ್ಮುಖ ವಹಿಸಿದ್ದ ಶ್ರೀಮಠದ ಧರ್ಮದರ್ಶಿ ಪೂಜ್ಯ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಮಾತನಾಡಿ ಅಡವೀಂದ್ರ ಸ್ವಾಮಿ ಮಠದಲ್ಲಿ ಕಳೆದ ೪೪ ವರ್ಷಗಳಿಂದ ಶ್ರೀದೇವಿಯ ಪುರಾಣ ಪ್ರವಚನ ನಡೆಸುತ್ತ ಬಂದಿದ್ದು ಇದರಿಂದ ಭಕ್ತ ಸಮೂಹದಲ್ಲಿ ಭಕ್ತಿ, ಧಾರ್ಮಿಕ ಪ್ರಜ್ಞೆ ಮೂಡಿದೆ ಎಂದರಲ್ಲದೆ ಅನ್ನಪೂರ್ಣೆಶ್ವರಿ ದೇವಿಯ ಮಹಾರಥೋತ್ಸವವನ್ನು ಕಳೆದ ೧೦ ವರ್ಷಗಳಿಂದ ನೆರವೇರಿಸಿಕೊಂಡು ಬರಲಾಗಿದ್ದು ಶ್ರೀದೇವಿಯ ರಥವನ್ನು ಮಹಿಳೆಯರೇ ಮುನ್ನಡೆಸುವದು ಇಲ್ಲಿನ ವಿಶೇಷವಾಗಿದೆ ಎಂದರು.
ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು, ಮಗುವಿಗೆ ಮನೆಯ ಪಾಠ ಶಾಲೆ ತಾಯಿಯೇ ಮೊದಲ ಗುರು ಎನ್ನುವ ಹಾಗೇ ರಥವನ್ನು ಮುನ್ನಡೆಸುವ ಮಹಿಳೆಯರು ಧರ್ಮವನ್ನು, ಸಮಾಜವನ್ನು, ಸಂಸಾರವನ್ನು ಅತ್ಯಂತ ಜವಾಬ್ದಾರಿಯಿಂದ ಶೃದ್ಧಾಭಕ್ತಿಯೊಂದಿಗೆ ಮುನ್ನಡೆಸಬಲ್ಲಳು ಎಂಬುವುದರ ಸಂಕೇತವೆAದು ಭಾವಿಸಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಪ್ರಕಾಶ ವೈಲಾಯ್, ವಿದ್ಯಾ ವೈಲಾಯ್, ಜಯಶ್ರೀ ಹುಣಶಿಕಟ್ಟಿ ಆಗಮಿಸಿದ್ದರು. ಭಕ್ತಿ ಸೇವೆಯನ್ನು ಎಸ್.ಎಂ.ಶಿವಾನAದಮಠ, ಜೆ.ಎ.ಮುಧೋಳ, ವೆಂಕಟೇಶ ಜಾಡರ, ವಿ.ಕೆ.ಮರಾಠಿ, ಎನ್.ವ್ಹಿ.ಸವಡಿ, ಸಿದ್ಧು ಜಾಧವ ವಹಿಸಿದ್ದರು.
ಜ.ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಪಾಠ ಶಾಲೆಯ ವಟುಗಳಿಂದ ವೇದಘೋಷ ಜರುಗಿತು. ಚನ್ನಬಸಯ್ಯ ಶಾಸ್ತಿçà ಹೇಮಗಿರಿಮಠ ಪುರಾಣ ಪಠಣ ಮಾಡಿದರು. ಸುಕ್ರುಸಾಬ ಮುಲ್ಲಾ, ಜಗನ್ನಾಥ ಕಲಬುರ್ಗಿ, ಗುರುನಾಥ ಸುತಾರ, ಎಸ್.ಬಿ.ಭಜಂತ್ರಿ ಅವರಿಂದ ಸಂಗೀತ ಜರುಗಿತು.
ಬಿ.ಬಿ.ತೋಟಗೇರ ಸ್ವಾಗತಿಸಿದರು, ಯು.ಆರ್.ಭೂಸನೂರಮಠ ನಿರೂಪಿಸಿದರು ಕೊನೆಗೆ ಎ.ಕೆ.ಮುಧೋಳ ವಂದಿಸಿದರು. ವೇದಿಕೆಯ ಮೇಲೆ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಬಸವರಾಜ ಪಲ್ಲೇದ, ಮಹಿಳಾ ಸಮಿತಿಯ ಅಧ್ಯಕ್ಷೆ ಲೀಲಾವತಿ ಬಿಳೇಯಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಂಡಿದ್ದರು.