ಜಿಲ್ಲೆ

ಆದರ್ಶ್ ಅತ್ತಾವರ ವಿಶ್ವದಾಖಲೆ

Mangaluru - Hariprasad Rai


ಮಂಗಳೂರು : ಜಪಾನಿನ ಹಿಮೇಜಿಯಲ್ಲಿ ನಡೆದ ಏಷ್ಯಾ, ಆಫ್ರಿಕನ್, ಪೆಸಿಫಿಕ್ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್
ಸ್ಪರ್ಧೆಯಲ್ಲಿ ಮಂಗಳೂರಿನ ಆದರ್ಶ ಅತ್ತಾವರ ಇವರು ಡೆಡ್‌ಲಿಫ್ಟ್ ವಿಭಾಗ 59 ಕೆ.ಜಿ. ದೇಹತೂಕ ವರ್ಗದಲ್ಲಿ 276 ಕೆ.ಜಿ .
ಭಾರ ಎತ್ತುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಭಾರತದ ಕ್ರೀಡಾಪಟುಗಳ ಪೈಕಿ ವಿಶ್ವ ದಾಖಲೆ ಮಾಡಿರುವ ಎರಡನೇ ವ್ಯಕ್ತಿ ಇವರಾಗಿದ್ದು, 1993ರಲ್ಲಿ ರೈಲ್ವೇಸ್‌ನ ಸಜೀವನ್ ಭಾಸ್ಕರನ್ ವಿಶ್ವ ದಾಖಲೆ ನಿರ್ಮಿಸಿದ್ದರು. ಆದರ್ಶ ಅತ್ತಾವರ ಮಂಗಳೂರಿನ ಬಾಲಾಂಜನೇಯ ಜಿಮ್ನಾಸಿಯಂನ ಸದಸ್ಯರಾಗಿದ್ದು ರೈಲ್ವೆ ಇಲಾಖೆ ಉದ್ಯೋಗಿಯಾಗಿದ್ದಾರೆ.