ಉಡುಪಿ: ದಾದಿಯರು ರೋಗಿಗಳ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಆದರ್ಶ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ.ಜಿ. ಎಸ್. ಚಂದ್ರಶೇಖರ್ ಹೇಳಿದರು.
ಆದರ್ಶ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ದಾದಿಯರ ದಿನಾಚರಣೆಯಲ್ಲಿ ಮಾತನಾಡಿದರು. ಪ್ರಸೂತಿ ತಜ್ಞೆ ಡಾ. ರಂಜಿತಾ ಎಸ್. ನಾಯಕ್ ಉದ್ಘಾಟಿಸಿದರು. ಆದರ್ಶ ಕಾಲೇಜ್ ಆಫ್ ನರ್ಸಿಂಗ್ ನ ಉಪ ಪ್ರಾಂಶುಪಾಲೆ ಯಶೋದಾ, ಆದರ್ಶ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಮಲಾ ಚಂದ್ರಶೇಖರ್, ಕೀಲು ಮತ್ತು ಮೂಳೆ ತಜ್ಞರಾದ ಡಾ. ಮೋಹನ್ ದಾಸ್ ಶೆಟ್ಟಿ, ಜನರಲ್ ಸರ್ಜನ್ ಡಾ. ಪ್ರಶಾಂತ್ ಶೆಟ್ಟಿ, ಹಿರಿಯ ವೈದ್ಯ ಡಾ. ಅಶೋಕ್ ಕುಮಾರ್ ವೈ. ಜಿ ಉಪಸ್ಥಿತರಿದ್ದರು. ಆದರ್ಶ ಆಸ್ಪತ್ರೆಗೆ ಹೊಸದಾಗಿ ಸೇರ್ಪಡೆಗೊಂಡ ನರ್ಸಿಂಗ್ ಮೇಲ್ವಿಚಾರಕಿ ನಾಗವೇಣಿ ಅವರನ್ನು ಸ್ವಾಗತಿಸಲಾಯಿತು. ಸಿಸ್ಟೆರ್ ಶೈಲಾ ಸ್ವಾಗತಿಸಿ, ಸಿಸ್ಟರ್ ಮನಿಷಾ ವಂದಿಸಿದರು. ಡಯಟಿಷಿಯನ್ ಅನುಶ್ರೀ ನಿರೂಪಿಸಿದರು.