ಜಿಲ್ಲೆ

ಸೆ.7ರಂದು ಜಿಲ್ಲೆಯ 36 ಶಿಕ್ಷಕರಿಗೆ 'ಆದರ್ಶ' ಪ್ರಶಸ್ತಿ ಪ್ರದಾನ

ಆದರ್ಶ ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ ಮಾಹಿತಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಆದರ್ಶ ಚಾರಿಟೇಬಲ್​ ಟ್ರಸ್ಟ್​ (ರಿ) ಉಡುಪಿ, ಆದರ್ಶ ಕಾಲೇಜ್​ ಆಫ್​ ನರ್ಸಿಂಗ್​, ಆದರ್ಶ ಇನ್​ಸ್ಟಿಟ್ಯೂಟ್​ ಆಫ್​ ಅಲೈಡ್​ ಹೆಲ್ತ್​ ಸೈನ್ಸಸ್​, ಆದರ್ಶ ಪ್ಯಾರಾಮೆಡಿಕಲ್​ ಕಾಲೇಜ್​, ಆದರ್ಶ ಆಸ್ಪತ್ರೆ ಉಡುಪಿ ಮತ್ತು ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೆ.7ರಂದು ಬೆಳಗ್ಗೆ 9:30ಕ್ಕೆ ಜಿಲ್ಲೆಯ 36 ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ ಮಾಹಿತಿ ನೀಡಿದ್ದಾರೆ.

ಉಡುಪಿಯ ಪತ್ರಿಕಾ ಭವನದಲ್ಲಿ ಸೆಪ್ಟೆಂಬರ್​ 6ರಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಲೆವೂರಿನಲ್ಲಿರುವ ಆದರ್ಶ ಸಮೂಹ ವಿದ್ಯಾ ಸಂಸ್ಥೆಗಳ ಸಂಕೀರ್ಣದಲ್ಲಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್​ ಅವರ ಜಯಂತಿ ಹಾಗೂ ಉಡುಪಿ ಜಿಲ್ಲಾ ಮಟ್ಟದ ಶಿಕ್ಷರ ದಿನಾಚರಣೆ ಆಯೋಜಿಸಲಾಗಿದೆ. ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ 5 ವಲಯಗಳ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ವಲಯಗಳ 30 ಶಿಕ್ಷಕರಿಗೆ ಹಾಗೂ ಸಿಬಿಎಸ್​ಸಿ ಶಾಲೆಗಳ 6 ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಲಾಗುವುದು ಎಂದರು.

ಸಮಾರಂಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಜಿಪಂ ಸಿಇಒ ಪ್ರತೀಕ ಬಾಯಲ್​, ಮಾಜಿ ಸಚಿವ ಪ್ರಮೋದ ಮಧ್ವರಾಜ, ಉಡುಪಿ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಅಶೋಕಕುಮಾರ್​ ಕೊಡವೂರು, ಅಲೆವೂರ ಗ್ರಾಪಂ ಅಧ್ಯಕ್ಷ ಯತೀಶ, ಉಡುಪಿ ಎಪಿಐ ಅಧ್ಯಕ್ಷ ಡಾ.ಸುರೇಶ ಹೆಗ್ಡೆ, ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಲೋಕೇಶ ಸಿ., ಆಸ್ಪತ್ರೆಯ ಸಿಇಒ ವಿಮಲಾ ಚಂದ್ರಶೇಖರ, ನಿರ್ದೇಶಕ ಡಾ. ಸುಹಾಸ ಜಿ.ಸಿ., ಕಾಲೇಜಿನ ಪ್ರಾಂಶುಪಾಲೆ ಸುದೀನಾ, ಇನ್​ಸ್ಟಿಟ್ಯೂಟ್​ನ ಪ್ರೊ.ರವಿಕುಮಾರ್​ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಹಿರಿಯ ಪ್ರಬಂಧಕ ಡಿಯಾಗೋ ಕ್ವಾಡ್ರಸ್​, ಸಹ ಸಂಯೋಜಕ ಡಾ.ಪ್ರಶಾಂತ ಜಿ.ಪಿ. ಇದ್ದರು.