ಅಳವಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ರೇಬಿಸ್ ದಿನ ಹಾಗೂ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಡಾ.ಚಂದ್ರು, ರೆಹಮತ್‌ಬೀ, ರವೀಂದ್ರ, ದಿಲ್‌ಖುಷಬೂ, ಸಾವಿತ್ರಿ, ನಾಗರಾಜ, ಚನ್ನವೀರಯ್ಯ ಇತರರಿದ್ದರು. 
ಜಿಲ್ಲೆ

ಆರಂಭದಲ್ಲಿಯೇ ಚಿಕಿತ್ಸೆ ಪಡೆಯಿರಿ

ಪ್ರವೀಣ ಉದುಸಾ ದಲಬಂಜನ್

ಅಳವಂಡಿ: ನಾಯಿ, ಬೆಕ್ಕುಗಳ ಕಡಿತ ಹಾಗೂ ಕಾಡು ಪ್ರಾಣಿಗಳ ಮೂಲಕ ರೇಬಿಸ್ ಸೋಂಕು ಹರಡುತ್ತದೆ. ಕಾಯಿಲೆ ಕುರಿತು ಜಾಗ್ರತೆ ಇರಲಿ ಎಂದು ವೈದ್ಯಾಧಿಕಾರಿ ಚಂದ್ರಶೇಖರ ಮೇಟಿ ತಿಳಿಸಿದರು.

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಶ್ವ ರೇಬಿಸ್ ದಿನ ಹಾಗೂ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಹಾಗೂ ಭಿತ್ತಿಪತ್ರ ಪ್ರದರ್ಶನದಲ್ಲಿ ಶನಿವಾರ ಮಾತನಾಡಿದರು.

ರೇಬಿಸ್ ರೋಗಕ್ಕೆ ಆರಂಭದಲ್ಲಿಯೇ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ನೇರವಾಗಿ ನರಮಂಡಲದ ಮೇಲೆ ಪರಿಣಾಮ ಬೀರಿ ಮಿದುಳಿಗೆ ಹಾನಿಯಾಗಿ ಸಾವು ಸಂಭವಿಸಬಹುದು. ರೇಬಿಸ್ ಅಪಾಯಕಾರಿ ರೋಗವಾಗಿದೆ. ಇದನ್ನು ತಡೆಯಲು ಲಸಿಕೆ ಪಡೆಯುವುದು ಕಡ್ಡಾಯ ಎಂದರು.

ಅಂಗನವಾಡಿ ಮೇಲ್ವಿಚಾರಕಿ ರೆಹಮತ್‌ಬೀ, ಪ್ರಮುಖರಾದ ರವೀಂದ್ರ ಕಮ್ಮಾರ, ದಿಲ್‌ಖಷ್‌ಬೂ, ರಾಜೇಶ್ವರಿ, ಸಾವಿತ್ರಿ ಹಂಚಿನಾಳ, ಸಾವಿತ್ರಿ ಹಿರೇಮಠ, ಶಿವಕುಮಾರ, ಬಸಪ್ಪ ಗಾಳಿ, ಚನ್ನವೀರಯ್ಯ, ನಾಗರಾಜ, ಕಲ್ಲಪ್ಪ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.