ನೀರಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಾಲಕರ ಸಭೆಯಲ್ಲಿ ಶಿಕ್ಷಕಿ ನೇತ್ರಾವತಿ ಆನಂದಳ್ಳಿ ಮಾತನಾಡಿದರು.  
ಜಿಲ್ಲೆ

ಮಕ್ಕಳ ಶಿಕ್ಷಣಕ್ಕೆ ಪಾಲಕರು ಒತ್ತು ನೀಡಲಿ

ಅಳವಂಡಿ: ಮಕ್ಕಳ ಕಲಿಕೆಗೆ ಪಾಲಕರು ಪ್ರೋತ್ಸಾಹ ನೀಡಿದರೆ ಉಜ್ವಲ ಭವಿಷ್ಯ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಕಲಿಕೆ ಟಾಟಾ ಟ್ರಸ್ಟ್‌ನ ಸಂಯೋಜಕ ಮೃತ್ಯುಂಜಯ ಹಿರೇಮಠ ಹೇಳಿದರು.

ಸಮೀಪದ ನೀರಲಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೆ ಟಾಟಾ ಟ್ರಸ್ಟ್‌ನಿಂದ ನಡೆದ ಪಾಲಕರು ಹಾಗೂ ಗ್ರಾಮದ ಮುಖಂಡರ ಸಭೆ ಉದ್ದೇಶಿಸಿ ಬುಧವಾರ ಮಾತನಾಡಿದರು.

ಸರ್ಕಾರಿ ಶಾಲೆಗಳ ಬಲವರ್ಧನೆಗೆ ಟ್ರಸ್ಟ್‌ನ ಸಹಭಾಗಿತ್ವವಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಮೂಲ ಸೌಕರ್ಯ ಜತೆಗೆ ವಿವಿಧ ತರಬೇತಿ ನೀಡಲಾಗುತ್ತಿದೆ. ಇದು ಅವರು ಶಿಕ್ಷಣದಲ್ಲಿ ಮುಂದುವರಿಯಲು ಸಹಕಾರಿಯಾಗಲಿದೆ. ಪಾಲಕರು ಕೂಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.

ಮುಖ್ಯ ಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದ ಜತೆಗೆ ಸಮುದಾಯ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವ ಪ್ರಮುಖವಾಗಿದೆ. ಮಕ್ಕಳ ಭವಿಷ್ಯಕ್ಕೆ ಸರ್ವರು ಶ್ರಮಿಸಬೇಕು ಎಂದರು. ಶಿಕ್ಷಕರಾದ ನೇತ್ರಾವತಿ ಆನಂದಳ್ಳಿ, ಕೃಷ್ಣಪ್ಪ ತಳಕಲ್ ಹಾಗೂ ಪಾಲಕರು ಇದ್ದರು.