ಜಿಲ್ಲೆ

ಜಾಬಿನ್ ಕಾಲೇಜಿನಲ್ಲಿ ಕಾನೂನು ಸಾಕ್ಷರತಾ ಜಾಗೃತಿ,  ಧಾರವಾಡದಲ್ಲಿ ಶಾಶ್ವತ ಜನತಾ ಅದಾಲತ್ ಸ್ಥಾಪನೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯದಲ್ಲಿ ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಶ್ವತ ಜನತಾ ಅದಾಲತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಾಶ್ವತ ಜನತಾ ಅದಾಲತ್ ಬಗ್ಗೆ ಕಾನೂನು ಸಾರತಾ ಜಾಗೃತಿ ಕಾರ್ಯಕ್ರಮ ಬುಧವಾರ ಏರ್ಪಡಿಸಲಾಗಿತ್ತು.

ಶಾಶ್ವತ ಜನತಾ ಅದಾಲತ್ ಅಧ್ಯಕ್ಷರು ಹಾಗೂ ಜಿಲ್ಲಾ ನ್ಯಾಯಾಧೀಶ ನಾಗರಾಜಪ್ಪ ಎ.ಕೆ. ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಶ್ವತ ಜನತಾ ಅದಾಲತ್ ಧಾರವಾಡದಲ್ಲಿ ಸ್ಥಾಪಿತವಾಗಿದ್ದು, ಇದರ ಅಡಿಯಲ್ಲಿ 7 ಜಿಲ್ಲೆಗಳು ಬರುತ್ತವೆ. ಜನತಾ ಅದಾಲತ್ ನಲ್ಲಿ ಸಾಮಾಜಿಕ ಸೇವೆಗಳಾದ ವಿದ್ಯುತ್, ನೀರು, ಟೆಲಿಕಾಂ ಸೇವೆ ಹಾಗೂ ಇತರ ಸಾರ್ವಜನಿಕ ಸೇವೆಗಳು ಅವರ ಸೇವೆಗಳಲ್ಲಿ ನ್ಯೂನತೆಯನ್ನು ಕಂಡಾಗ ಸಾರ್ವಜನಿಕರು ಇವುಗಳ ವಿರುದ್ಧ ಮೊಕದ್ದಮೆಯನ್ನು ದಾಖಲಿಸಬಹುದು. ಅಲ್ಲದೆ ಬೇರೆ ನ್ಯಾಯಾಲಯಗಳಲ್ಲಿ ಬಹಳ ದಿನಗಳಿಂದ ತೀರ್ಮಾನವಾಗದೆ ಉಳಿದ ಮೊಕದ್ದಮೆಗಳನ್ನು ಜನತಾ ಅದಾಲತ್ ನಲ್ಲಿ ಒಪ್ಪಂದದ ಮೂಲಕ ಬಗೆಹರಿಸಿಕೊಳ್ಳಬಹುದು. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಅತಿಥಿಯಾಗಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಫೋಕ್ಸೋ ಮೊಕದ್ದಮೆಗಳು ಹೆಚ್ಚಾಗಿದ್ದು, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಾಧೀಶರ ಆದೇಶದ ಮೇರೆಗೆ ಎಲ್ಲ ಶಾಲೆ ಕಾಲೇಜುಗಳಲ್ಲಿ ಈ ಮೊಕದ್ದಮೆಗಳ ಬಗ್ಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಡಾ. ಸಂಧ್ಯಾ ಆರ್. ಕುಲಕರ್ಣಿ, ನಝರಿನ ಮುಶೀರ ಉಪಸ್ಥಿತರಿದ್ದರು.
ಪ್ರಾಂಶುಪಾಲ ವಿ.ಆರ್. ವಾಘಮೋಡಿ ಸ್ವಾಗತಿಸಿದರು. ಸವಿತಾ ಎಸ್.ಎಚ್. ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯ ಬಿ.ಜಿ.ಡಿ. ಇಟಗಿ ವಂದಿಸಿದರು.