ಜಿಲ್ಲೆ

ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮ

ಎ. ಆರ್. ರಘುರಾಮ


ಹನೂರು : ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಅರ್ಜಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ತಿಳಿಸಿದರು.ಸಮೀಪದ ಬೂದುಬಾಳು ಗ್ರಾಮದಲ್ಲಿ ಮಂಗಳವಾರ ಕಂದಾಯ ಇಲಾಖೆಯ ಆಯೋಜಿಸಿದ್ದ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಹಣಿ ಪತ್ರದಲ್ಲಿನ ಹೆಸರು, ವಿಸ್ತೀರ್ಣದಲ್ಲಿನ ವ್ಯತ್ಯಾಸ, ಪೌತಿ ಖಾತೆ ಹಾಗೂ ಜಮೀನಿಗೆ ಸಂಬಂಧಿಸಿದ ದಾಖಲೆಗಳ ಲೋಪದೋಷ ಬಗೆಹರಿಸುವ ನಿಟ್ಟಿನಲ್ಲಿ ಕಂದಾಯ ಅದಾಲತ್ ಆಯೋಜಿಸಲಾಗುತ್ತಿದೆ. ಆದ್ದರಿಂದ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಹಾಗೆಯೇ ಸಾಮಾಜಿಕ ಭದ್ರತಾ ಯೋಜನೆಗಳಾದ ವಿಕಲಚೇತನ, ವೃದ್ಧಾಪ್ಯ, ವಿಧವಾ ವೇತನ, ಮೈತ್ರಿ ಯೋಜನೆಯನ್ನು ಆರ್ಹರಿಗೆ ತಲುಪಿಸುವ ಸಲುವಾಗಿ ಪಿಂಚಣಿ ಆದಾಲತ್ ಆಯೋಜಿಸಲಾಗಿದೆ. ವಿವಿಧ ಯೋಜನೆಯಿಂದ ವಂಚಿತರಾದವರು ಅಗತ್ಯ ದಾಖಲೆಗಳನ್ನು ನೀಡಿ ಸರ್ಕಾರದ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು.
ಸಮಸ್ಯೆಗಳಿಗೆ ಸಂಬಂಧಿಸಿದಂತೆ 68 ಅರ್ಜಿ ಸಲ್ಲಿಕೆಯಾದವು. ಈ ಸಂದರ್ಭ ಗ್ರೇಡ್ 2 ತಹಸೀಲ್ದಾರ್ ಧನಂಜಯ, ಶಿರಸ್ತೇದಾರ್ ನಾಗೇಂದ್ರ, ಆರ್‌ಐ ಮಹದೇವಸ್ವಾಮಿ, ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಭಾಗ್ಯಲಕ್ಷ್ಮೀ, ಜಯಮ್ಮ, ಚಿನ್ನಮುತ್ತು, ಪಿಡಿಒ ರೂಪಾ ಬಡಿಗೇರ್, ಗ್ರಾಮ ಆಡಳಿತ ಅಧಿಕಾರಿ ಹೇಮಾಲತಾ ಇತರರು ಇದ್ದರು.