ಹುಬ್ಬಳ್ಳಿ: ಧಾರವಾಡ ಹಳೇ ಜಿಲ್ಲೆಯ ಅಡಕೆ ಬೆಳೆಗಾರರ ಸಂಘದ ಸಭೆ ಬುಧವಾರ ನಗರದಲ್ಲಿ ಜರುಗಿತು. ಅಡಕೆ ಬೆಳೆಯುವ ರೈತರ ಸಮಸ್ಯೆಗಳು, ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಡಿ.ಟಿ. ಪಾಟೀಲ ಮಾತನಾಡಿದರು.
ಅಡಕೆ ಬೆಳೆ ಕೊಯ್ಲು ಹಾಗೂ ಮಾರಾಟ, ಸಂಘದ ಸದಸ್ಯತ್ವ ಅಭಿಯಾನ ಮಾಡಿ ಜಿಲ್ಲೆಯ ಅಡಕೆ ಬೆಳೆಗಾರರಿಗೆ ಸಮಗ್ರ ಮಾಹಿತಿ ನೀಡುವುದು, ಬೆಳೆಗೆ ಪೂರಕ ವ್ಯವಸ್ಥೆ ಮಾಡುವುದು, ನೀರಾವರಿ, ಉತ್ತಮ ಸಸಿಗಳ ನಾಟಿ, ನಿರ್ವಹಣೆ, ಸಾವಯವ ಕೃಷಿ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳನ್ನು ಮುಖಂಡರು ಸೂಚಿಸಿದರು.
ಸಂಘದ ಉಪಾಧ್ಯಕ್ಷ ಕೇಶವ ಯಾದವ, ಖಜಾಂಚಿ ಮಂಜುನಾಥ ಚಟ್ನಿ, ಕಾರ್ಯದರ್ಶಿ ಮಹೇಶ ಬೆಳಗಾಂವಕರ ಇತರರು ನೇತೃತ್ವ ವಹಿಸಿದ್ದರು.