ಜಿಲ್ಲೆ

ಸಹಜ ಕಾಯಿಲೆಗಳಿಗೆ ಅಕ್ಯುಪ್ರೆಷರ್‌ನಿಂದ ಚಿಕಿತ್ಸೆ

Kodagu

ಮಡಿಕೇರಿ; ಮಾನವನಿಗೆ ಕಾಡುವ ಸಹಜ ಕಾಯಿಲೆಗಳಿಗೆ ಅಕ್ಯುಪ್ರೆಷರ್ ಮೂಲಕ ಚಿಕಿತ್ಸೆ ನೀಡಲು ಸಾಧ್ಯವಿದೆ ಎಂದು ರಾಜಸ್ತಾನ ಜೋದಪು ರದ ಅಕ್ಯುಪ್ರೆಷರ್ ತರಬೇತಿ ಹಾಗೂ ಸಂಶೋಧನಾ ಶಿಕ್ಷಣ ಸಂಸ್ಥೆಯ ಅಕ್ಯುಪ್ರೆಷರ್ ಮತ್ತು ಸುಜೋಕ್ ತಜ್ಞ ಡಾ.ಆರ್.ಪಿ.ಭಟಿ ತಿಳಿಸಿದರು.

ಕುಶಾಲನಗರ ರೋಟರಿ ಸಂಸ್ಥೆ ಹಾಗೂ ಅಕ್ಯುಪ್ರೆಷರ್ ಸಂಸ್ಥೆ ಸಹಯೋಗದೊಂದಿಗೆ ಸ್ಥಳೀಯ ರೋಟರಿ ಸಭಾಂಗಣದಲ್ಲಿ ಆಯೋಜಿ ರುವ ’ಅಕ್ಯುಪ್ರೆಷರ್ ಮತ್ತು ಸುಜೋಕ್’ ಕುರಿತ ಕಾರ್ಯಾಗಾರ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.

ತಲೆನೋವು, ಕಣ್ಣುಬೇನೆ, ಜ್ವರ, ಒತ್ತಡ, ಮಂಡಿ ನೋವು ಸೇರಿದಂತೆ ಇತರ ಕಾಯಿಲೆಗಳಿಗೆ ಅಕ್ಯುಪ್ರೆಷರ್‌ಗಳ ತಂತ್ರದಿಂದ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುವುದು. ಈ ಸೌಲಭ್ಯವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಸಂಯೋಜಕ ಎಸ್.ಕೆ.ಸತೀಶ್, ರೋಟರಿ ಸಂಸ್ಥೆ ಅಧ್ಯಕ್ಷ ಅಶೋಕ್, ಸಹಾಯಕ ರೋಟರಿ ಗೌರ್ನರ್ ಪಿ.ನಾಗೇಶ್, ರೋಟರಿ ಮಾಜಿ ಅಧ್ಯಕ್ಷ ಪ್ರಕಾಶ್, ನಿಯೋಜಿತ ಅಧ್ಯಕ್ಷ ಚಂದ್ರಶೇಖರ್, ಕಾರ್ಯಕ್ರಮದ ಸಂಚಲಕ ಸಂಜುಬೆಳ್ಳಿಯಪ್ಪ, ಶೋಭಾ ಸತೀಶ್ ಉಪಸ್ಥಿತರಿದ್ದರು.