ಜಿಲ್ಲೆ

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಪ್ರಣಿತಾ ಸುಭಾಷ್‌

ಬೆಂಗಳೂರು: ಸ್ಯಾಂಡಲ್​​ವುಡ್​ ನಟಿ ಪ್ರಣಿತಾ ಸುಭಾಷ್​ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಮೊದಲ ಮಗು ಹೆಣ್ಣಾಗಿತ್ತು. ಇದೀಗ ಮಗಳಿಗೆ ತಮ್ಮ ಬಂದಿದ್ದಾನೆ.

ನಟಿ ಪ್ರಣಿತಾ ಸುಭಾಷ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಹಾಗೂ ಮಗು ಕೂಡ ಆರೋಗ್ಯವಾಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ಆ ಮಗುವಿಗೆ ಆರ್ನಾ ಅನ್ನೋ ಹೆಸರು ಇಟ್ಟಿದ್ದರು. ಈಗ ಎರಡನೇ ಸಲ ಅಮ್ಮ ಆಗಿದ್ದಾರೆ. ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ.

ಪ್ರಣಿತಾ ಸುಭಾಷ್ ಉದ್ಯಮಿ ನಿತಿನ್ ರಾಜು ಜೊತೆಗೆ 2021 ರಲ್ಲಿ ಮದುವೆ ಆಗಿದ್ದರು. 2022 ರಲ್ಲಿ ಮಗಳು ಆರ್ನಾ ಹುಟ್ಟಿದ್ದಳು. ಈಗ ಪ್ರಣತಾ ಸುಭಾಷ್ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ.

ಕನ್ನಡ ಮಾತ್ರವಲ್ಲ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲೂ ಪ್ರಣಿತಾ ಆ್ಯಕ್ಟಿಂಗ್ ಮಾಡಿದ್ದಾರೆ. ಈಗ ಸಿನಿಮಾ ರಂಗದಿಂದ ದೂರು ಉಳಿದು ಕುಟುಂಬದ ಜೊತೆ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ. ತಮ್ಮ ಮಗಳಾದ ಆರ್ನಾ ಆರೈಕೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಮತ್ತೊಂದು ಮಗುವನ್ನು ಬರಮಾಡಿಕೊಂಡ ಸುಂದರ ಕ್ಷಣವನ್ನು ಅನುಭವಿಸುತ್ತಿದ್ದಾರೆ.