ಜಿಲ್ಲೆ

4 ತಿಂಗಳಿಗೆ ಮಾತನಾಡಿದ ʻತಿಥಿʼ ಸಿನಿಮಾ ನಟಿ ಮಗು; ವಿಡಿಯೋ ನೋಡಿ....

ಬೆಂಗಳೂರು: ʻತಿಥಿʼ ಸಿನಿಮಾದ ಕಾವೇರಿ ಪಾತ್ರದಲ್ಲಿ ಅಭಿನಯಿಸಿದ್ದ ನಟಿ ಪೂಜಾ ಎಸ್ ಎಂ ಮಗು ಹುಟ್ಟಿದ ನಾಲ್ಕು ತಿಂಗಳೀಗೆ ಮಾತನಾಡಲು ಶುರು ಮಾಡಿದೆ. ಈ ಕುರಿತಾದ ವಿಡಿಯೋ ವೈರಲ್‌ ಆಗಿದೆ.

ನಟಿ ಪೂಜಾ ಎಸ್ ಎಂ ಸಾಫ್ಟವೇರ್‌ ಎಂಜಿನಿಯರ್‌ ಪ್ರೇಮ್‌ ಎಂಬುವರ ಕೈ ಹಿಡಿದಿದ್ದರು. 4 ತಿಂಗಳ ಹಿಂದೆ ಮುದ್ದಾದ ಗಂಡು ಮಗುವಿಗೆ ಪೂಜಾ ಜನ್ಮ ನೀಡಿದ್ದರು. ಇದೀಗ ಮಗ ‘ಐ ಲವ್ ಯು’ ಎಂದು ತಂದೆ ಹೇಳಿಕೊಟ್ಟಂತೆ ಹೇಳಿರುವ ಕ್ಯೂಟ್‌ ವಿಡಿಯೊ ವೈರಲ್‌ ಆಗುತ್ತಿದೆ.

4 ತಿಂಗಳ ಮಗನನ್ನು ಮಡಿಲಲ್ಲಿ ಮಲಗಿಸಿಕೊಂಡು ಪೂಜಾ ಪತಿ ಪ್ರೇಮ್ ‘ಐ ಲವ್ ಯು’ ಎಂದು ಒಂದೊಂದೇ ಪದವನ್ನು ಹೇಳಿಕೊಟ್ಟಿದ್ದಾರೆ. ಅದನ್ನು ಮಗು ಕೂಡ ಚೆನ್ನಾಗಿ ಆಲಿಸಿ ಹೇಳಿದೆ. “ನಮ್ಮ 4 ತಿಂಗಳ ಮಗು ತಂದೆಗೆ ತನ್ನ ಮೊದಲ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ” ಎಂದು ಬರೆದು ಪೂಜಾ ವಿಡಿಯೊ ಹಂಚಿಕೊಂಡಿದ್ದಾರೆ.

ತಿಥಿ ಚಿತ್ರದಲ್ಲಿ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿಯನ್ನು ಪೂಜಾ ಪಡೆದಿದ್ದಾರೆ.