ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್ ಅವರನ್ನು ಅರಮನೆ ಮಂಡಳಿಯಿಂದ ಸನ್ಮಾನಿಸಲಾಯಿತು. 
ಜಿಲ್ಲೆ

ಮೈಸೂರು ಅರಮನೆಗೆ ನಟಿ ಕಾಜಲ್ ಅಗರ್ವಾಲ್ ಭೇಟಿ

ಮೈಸೂರು: ಖ್ಯಾತ ತೆಲುಗು ನಟಿ ಕಾಜಲ್ ಅಗರ್ವಾಲ್ ಮಂಗಳವಾರ ಮೈಸೂರು ಅರಮನೆಗೆ ಭೇಟಿ ನೀಡಿ, ಅರಮನೆಯ ಐತಿಹಾಸಿಕ ವೈಭವ ಹಾಗೂ ರಾಜರ ಕಾಲದ ವಾಸ್ತುಶಿಲ್ಪವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅರಮನೆಗೆ ಆಗಮಿಸಿದ ಕಾಜಲ್ ಅಗರ್ವಾಲ್ ಅವರು ಅರಮನೆಯ ವಿವಿಧ ಭಾಗಗಳನ್ನು ವೀಕ್ಷಿಸಿದರು. ರಾಜರ ಕಾಲದ ಜೀವನಶೈಲಿ, ಅರಮನೆಯ ವಾಸ್ತುಶಿಲ್ಪ, ಕಲಾಕೃತಿಗಳು ಹಾಗೂ ಅಲ್ಲಿನ ಐತಿಹಾಸಿಕ ವೈಶಿಷ್ಟೃಗಳ ಕುರಿತು ಮಾಹಿತಿ ಪಡೆದುಕೊಂಡರು. ಮೈಸೂರು ಅರಮನೆಯ ಗತಕಾಲದ ವೈಭವವನ್ನು ಕಣ್ತುಂಬಿಕೊಂಡ ಅವರು, ಅರಮನೆಯ ಸೌಂದರ್ಯ ಮತ್ತು ವೈಶಿಷ್ಟೃಗಳನ್ನು ಕಂಡು ಸಂತಸಪಟ್ಟರು.

ಈ ಸಂದರ್ಭದಲ್ಲಿ ಅರಮನೆ ಮಂಡಳಿ ವತಿಯಿಂದ ಕಾಜಲ್ ಅಗರ್ವಾಲ್ ಅವರನ್ನು ಸನ್ಮಾನಿಸಲಾಯಿತು. ಅರಮನೆಗೆ ಭೇಟಿ ನೀಡಿದ ನಟಿಯನ್ನು ಕಂಡ ಅಭಿಮಾನಿಗಳು ಸಂತಸಗೊಂಡಿದ್ದು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ಅಭಿಮಾನಿಗಳೊಂದಿಗೆ ಕೆಲಕಾಲ ಆತ್ಮೀಯವಾಗಿ ಕಾಣಿಸಿಕೊಂಡ ಕಾಜಲ್ ಅಗರ್ವಾಲ್ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಅಭಿಮಾನಿಗಳು ಖುಷಿಪಟ್ಟರು.