ಮುಧೋಳ: ನಗರದ ಅರಳಿಕಟ್ಟೆ ಫೌಂಡೇಶನ್ ಸಂಸ್ಥೆಯ ಆರನೇ ವಾರ್ಷಿಕೋತ್ಸವ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ದಿ ವಿ.ಎಚ್. ಅರಳಿಕಟ್ಟಿ ಕೃಷಿರತ್ನ ಪ್ರಶಸ್ತಿ ಪ್ರಧಾನ ಸಮಾರಂಭವು ಇಂಗಳಗಿ ರಸ್ತೆಯಲ್ಲಿರುವ ಶ್ರೀಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ, ಅ.31 ರಂದು ರಂದು ಸಂಜೆ 5.30 ಗಂಟೆಗೆ ಹಮ್ಮಿಕೊಳ್ಳಲಾಗುವುದು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಹಾಗೂ ವಿಶೇಷ ಅಮಂತ್ರಿತರಾಗಿ ಖ್ಯಾತ ಚಲನಚಿತ್ರದ ನಟಿ ಭವ್ಯಾ ಅಗಮಿಸಿ ಪ್ರಶಸ್ತಿ ವಿತರಣೆ ಮಾಡುವರು. ಯಡಹಳ್ಳಿಯ ಶ್ರೀಅಡವಿಸಿದ್ದೇಶ್ವರ ಮಠದ ಚಂದ್ರಶೇಖರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು, ಸಚಿವ ಆರ್. ಬಿ. ತಿಮ್ಮಾಪೂರ ಅಧ್ಯಕ್ಷತೆ ವಹಿಸುವರು, ಮಾಜಿ ಸಚಿವ ಎಸ್. ಆರ್. ಪಾಟೀಲ ಉದ್ಘಾಟಿಸಲಿದ್ದಾರೆ.
ಕೃಷಿರತ್ನ ಪ್ರಶಸ್ತಿಯನ್ನು ಬಿ.ಡಿ.ಸಿ.ಸಿ. ಬ್ಯಾಂಕ್, ಅಧ್ಯಕ್ಷ ಅಜಯಕುಮಾರ ಸರನಾಯಕ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ನಿರಾಣಿ ಸಮೂಹ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಪ್ರಧಾನ ಮಾಡುವರು. ಅರಳಿಕಟ್ಟಿ ೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ತಿಮ್ಮಣ್ಣ ಅರಳಿಕಟ್ಟಿ, ವಿನಾಯಕ ಅರಳಿಕಟ್ಟಿ, ಮುಖ್ಯ ಅತಿಥಿಗಳಾಗಿ ಬೆಳಗಾವಿಯ ಡೆಪ್ಯೂಟಿ ಕಮಿಷನರ್ ಆ್ ಪೊಲೀಸ್ ನಾರಾಯಣ ಬರಮನಿ, ಕೊಣ್ಣೂರ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಸವರಾಜ ಕೊಣ್ಣೂರ, ಮುಧೋಳ ಕಬ್ಬು ಬೆಳೆಗಾರರ ಸೌಹಾರ್ದ ಸಹಕಾರಿ ನಿ., ಸಂಘದ ಅಧ್ಯಕ್ಷ ಗಿರೀಶಗೌಡ ಪಾಟೀಲ,ಉಪಾಧ್ಯಕ್ಷ ಅನಂತರಾವ ಘೋರ್ಪಡೆ , ಮುಧೋಳ ರಾಯಲ್ ಸ್ಕೂಲ್, ಅಧ್ಯಕ್ಷ ಸವಿತಾ ಅರಳಿಕಟ್ಟಿ, ಉಪಾಧ್ಯಕ್ಷ ರಾಜೇಶ್ವರಿ ರು. ಕೋಮಾರ , ಸಿ.ಟಿ. ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ.ಉಪಾಧ್ಯಕ್ಷ, ವರ್ಷಾ ಸಂ. ಘಾರಗೆ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.