ಜಿಲ್ಲೆ

ಹಾಸನಾಂಬೆ ದರ್ಶನಕ್ಕೆ ನಟ-ನಟಿಯರು

ಪ್ರಸಿನ್ ಕೆ.ಆರ್

ಹಾಸನ: ಹಾಸನಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ರಾಜಕೀಯ ಪಕ್ಷದ ಮುಖಂಡರು ಮತ್ತು ಸಿನಿಮಾ ನಟ ನಟಿಯರು ಕೂಡ ಶಿಷ್ಟಾಚಾರದ ಪ್ರಕಾರ ಆಗಮಿಸಿ ದೇವಿಯ ದರ್ಶನ ಪಡೆದರು.

ದೇವಿ ದರ್ಶನಕ್ಕಾಗಿ ನಟಿಯರಾದ ತಾರಾ, ಅಂಜಲಿ ಮತ್ತು ತ್ರಿವೇಣಿ ಅವರು ಗಣ್ಯರ ಶಿಷ್ಟಾಚಾರದ ವಾಹನದಲ್ಲಿ ದೇವಾಲಯಕ್ಕೆ ಆಗಮಿಸಿದರು. ಇವರೊಂದಿಗೆ ತುಳು ನಟ ಲಂಚು ಲಾಲ್ ಹಾಗೂ ಶ್ರೀಕಾಂತ್ ಪ್ರಸಾದ್ ಸಹ ಹಾಸನಕ್ಕೆ ಬಂದಿದ್ದರು.

ಸಿನಿಮಾ ತಾರೆಯರು ದೇವಾಲಯಕ್ಕೆ ಬಂದಿದ್ದ ಸಂದರ್ಭ ಶಾಸಕ ಎಚ್.ಡಿ. ರೇವಣ್ಣ ಅವರು ದೇವಾಲಯದ ಗರ್ಭಗುಡಿಯಲ್ಲಿ ಪೂಜೆ ಸಲ್ಲಿಸುತ್ತಿದ್ದ ಹಿನ್ನೆಲೆ ನಟಿ ತಾರಾ ಅವರು ದೇವಾಲಯದ ಹೊರಗೆ ಕೆಲಕಾಲ ಕುಳಿತು ದರ್ಶನಕ್ಕಾಗಿ ನಿರೀಕ್ಷಿಸಿದರು.

ಈ ಸಮಯದಲ್ಲಿ ಕಾಂಗ್ರೆಸ್ ಶಾಸಕ ರಮೇಶ್ ಬಂಡಿ ಸಿದ್ದೇಗೌಡ ಮತ್ತು ಅವರ ಪತ್ನಿ ಕೂಡ ದೇವಿ ದರ್ಶನಕ್ಕಾಗಿ ಆಗಮಿಸಿ ದೇವಿ ದರ್ಶನಕ್ಕೆ ಕಾದಿದ್ದರು. ನಂತರ ಅಧಿಕಾರಿಗಳು ಶಾಸಕರನ್ನು ವಾರ್ ರೂಮ್‌ಗೆ ಕರೆದುಕೊಂಡು ಹೋಗಿ ದೇವಾಲಯದ ಒಳಗಿನ ವ್ಯವಸ್ಥೆ ಹಾಗೂ ಪೂಜಾ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದರು.