ಭಟ್ಕಳ : ತಾಲೂಕಿನ ಶಿರಾಲಿಯ ಚಿತ್ರಾಪುರ ಮಠಕ್ಕೆ ನಟ ಯಶ್ ಹಾಗೂ ಅವರ ಪತ್ನಿ, ನಟಿ ರಾಧಿಕಾ ಪಂಡಿತ್ ಗುರುವಾರ ಸಂಜೆ ಭೇಟಿ ನೀಡಿದರು.
ಸಾಯಂಕಾಲ 5 ಗಂಟೆಗೆ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.ನಂತರಾ ಸಂಜೆ 6 ಗಂಟೆಗೆ ಚಿತ್ರಾಪುರ ಮಠದ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಸತತ 2 ಗಂಟೆಗೂ ಅಧಿಕ ಕಾಲ ಸ್ವಾಮೀಜಿಗಳ ಜೊತೆಗೆ ಮಾತುಕತೆ ನಡೆಸಿದರು.
ಚಿತ್ರಾಪುರಕ್ಕೆ ಯಶ್, ರಾಧಿಕಾ ದಂಪತಿ ಕುಟುಂಬ ಸಮೇತರಾಗಿ ಬಂದಿರುವ ಸುದ್ದಿ ತಿಳಿದ ಅಭಿಮಾನಿಗಳು ಮಠದ ಎದುರು ಜಮಾವಣೆಯಾಗಿದ್ದರು. ಮಠದ ಹೊರಗೆ ಯಶ್ ಅಗಮನಕ್ಕಾಗಿ ಕಾಯುತ್ತಿದರು. ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿ ರಾತ್ರಿ 8.30ಕ್ಕೆ ಹೊರಗೆ ಬಂದ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ, ಅಭಿಮಾನಿಗಳ ಬಳಿ ಬಂದು ಸ್ವಲ್ಪ ಸಮಯ ಕಳೆದು ಫೋಟೋ ಹಾಗೂ ಆಟೋಗ್ರಾಫ್ ನೀಡಿ ತೆರಳಿದರು.
ಯಶ್ ಹಾಗೂ ರಾಧಿಕಾ ಪಂಡಿತ್ ಜೊತೆಗೆ ಮಗಳು ಐರಾ, ಮಗ ಯಥರ್ವ ಹಾಗೂ ರಾಧಿಕಾ ತಂದೆ, ತಾಯಿ ಕೂಡ ಆಗಮಿಸಿದ್ದರು.
ಇದನ್ನೂ ಓದಿ: ಕೆನರಾ ವೃತ್ತದಲ್ಲಿ ಮೊದಲ ಬಾರಿಗೆ ಪಕ್ಷಿ ಗಣತಿ