ಜಿಲ್ಲೆ

ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಸೇವೆ ನೆರವೇರಿಸಿದ ಚಿತ್ರ ನಟ ಸುದೀಪ್

Dakshina Kannada

ಮಂಗಳೂರು: ಚಿತ್ರ ನಟ ಸುದೀಪ್ ಶನಿವಾರ ದ.ಕ.ಜಿಲ್ಲೆಯ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಮಠದಲ್ಲಿ ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆ ನೆರವೇರಿಸಿದರು. ಪತ್ನಿ ಪ್ರಿಯಾ ಜತೆಗಿದ್ದರು. ಇದಕ್ಕೂ ಮೊದಲು ಶ್ರೀಕ್ಷೇತ್ರ ಸುಬ್ರಹ್ಮಣ್ಯಕ್ಕೂ ತೆರಳಿ ದೇವರ ದರ್ಶನ ಪಡೆದರು.