ಬೆಂಗಳೂರು: ಸೆಪ್ಟೆಂಬರ್ 2ರಂದು ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಹುಟ್ಟುಹಬ್ಬ. ಈ ಕುರಿತಾಗಿ ಕಿಚ್ಚ ಪ್ರೆಸ್ ಮೀಟ್ ಕರೆದಿದ್ದಾರೆ. ಈ ವೇಳೆ ನಟ ದರ್ಶನ್ ಕುರಿತಾಗಿಯೂ ಮಾತನಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೇಣುಕಾಸ್ವಾಮಿ ಕೊಲೆ ಆರೋಪಿಯಾಗಿ ಬಳ್ಳಾರಿ ಜೈಲು ಸೇರಿರುವ ದರ್ಶನ್ ಕುರಿತಾಗಿ ಕಿಚ್ಚ ಸುದೀಪ್ ಮಾತನಾಡಿದ್ದಾರೆ, ನೀವು ಏನ್ ಮಾತನಾಡುತಿದ್ದೀರಾ? ನಾನು ಒಳಗೆ ಹೋಗಬೇಕು ಅಂತಾ? ಅಥವಾ ಅವರನ್ನ ಹೊರಗೆ ಕಳಸಬೇಕಾ? ಎಂದು ಕಿಚ್ಚ ಮಾಧ್ಯಮದವರಿಗೆ ಮರು ಪ್ರಶ್ನಿಸಿದ್ದಾರೆ. ಅವರಿಗೆ ಕುಟುಂಬ ಅಭಿಮಾನಿಗಳಿದ್ದಾರೆ, ಕುಟುಂಬ ಇದೆ. ನಾವು ಮಾತಾಡಿ ನೋವು ಕೊಡೋದು ಬೇಡ. ರಾಜಕೀಯವಾಗಿ ಮಾತಾಡ್ತಿದ್ದೀನಿ ಅಂತ ಬೇಡ. ಕಾನೂನು ನಂಬಬೇಕಿದೆ ಎಂದಿದ್ದಾರೆ.
ನಾನು ಮಾಧ್ಯಮ ನೋಡ್ತಿದ್ದೇನೆ. ಕೋರ್ಟ್ಗೆ ಹೋಗಿ ತಪ್ಪು ಅಂತ ಹೇಳದೆ ಹೇಗೆ ಮಾತಾಡೋಕೆ ಆಗುತ್ತೆ?. ಇನ್ನೂ ಕಾನೂನು ಇದೆ. ತನಿಖೆ ಆಗ್ತಿದೆ. ಸತ್ಯ ಗೊತ್ತಿಲ್ಲದೇ ಏನೂ ಮಾತಾಡೋಕೆ ಆಗಲ್ಲ. ಅಷ್ಟು ಆತುರವಾಗಿ ಯಾಕೆ ಮಾತಾಡೋಕೆ ಆಗುತ್ತೆ ಎಂದು ಹೇಳಿದ್ದಾರೆ.
ದೇವರನ್ನ ನಂಬಿದ ಕೂಡಲೇ ರಿಸೆಲ್ಟ್ ಬರಲ್ಲ. ನಾವು ಹೇಳಿದರೂ ರಿಸೆಲ್ಟ್ ಬರಲ್ಲ .. ಅದನ್ನ ಕಾಯಬೇಕು. ಕಾದು ಮಾತನಾಡಬೇಕು ಎಂದು ನಟ ಕಿಚ್ಚ ಸುದೀಪ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಕಳೆದ ತಿಂಗಳು ಬರ್ತ್ಡೇ ಸಂದರ್ಭದಲ್ಲಿ ಸಾಕಷ್ಟು ಗೊಂದಲ ಆಯ್ತು. ಅಕ್ಕ-ಪಕ್ಕದ ಮನೆಯವರು ರಿಕ್ವೆಸ್ಟ್ ಮಾಡಿದ್ದರು. ಮನೆಯ ಬಳಿ ಆಚರಣೆ ಬೇಡ. ಜಯನಗರದಲ್ಲಿರುವ ಟೆಲಿಫೋನ್ ಎಕ್ಸ್ಚೇಂಜ್ ಎದುರು MES ಗ್ರೌಂಡ್ ಇದೆ. ಬೆಳಿಗ್ಗೆ 10 ಗಂಟೆಯಿಂದ 12ವರೆಗೆ ಇರುತ್ತೇನೆ. ಬರುವ ಸ್ನೇಹಿತರು ಅಲ್ಲಿ ಭೇಟಿ ಮಾಡುತ್ತೇನೆ. ಇದಾದಮೇಲೂ ಮನೆಯವರ ಬಳಿ ಬರುತ್ತಾರೆ. ಆದರೆ, ಅಲ್ಲಿ ಒಪ್ಪಿಗೆ ಇಲ್ಲ. ಎಂಇಎಸ್ ಗ್ರೌಂಡ್ನಲ್ಲೂ ಪ್ರೋಟೋಕಾಲ್ ಇದೆ’ ಎಂದಿದ್ದಾರೆ ಸುದೀಪ್.