ತುಮಕೂರು: ದಸರಾ ಹಬ್ಬ ಎಂದಾಕ್ಷಣ ಸಂಭ್ರಮ, ಸಡಗರ ಮನೆ ಮಾಡಿರುತ್ತದೆ. ಈ ಹಬ್ಬ ಎಲ್ಲರೂ ಸೇರಿ ಆಚರಿಸಿ ಸಂಭ್ರಮಿಸುವ ನಾಡಹಬ್ಬ ಎಂದ ನಟ ಡಾ.ಶಿವರಾಜಕುಮಾರ್ ಹೇಳಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಅಮರ ಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಜಿಲ್ಲಾಡಳಿತದ ವತಿಯಿಂದ ತುಮಕೂರು ದಸರಾ ಉತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸತಿಕ ವೈಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಬ್ಬಗಳ ಸಂಭ್ರಮವೇ ವಿಶೇಷ. ಎಲ್ಲರನ್ನೂ ಒಂದೆಡೆ ಸೇರಿಸುವ ದಸರಾ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ$್ಯತೆ ಇದೆ ಎಂದರು.
ಅಪ್ಪಾಜಿಗೆ ಅಚ್ಚುಮೆಚ್ಚು: ತುಮಕೂರು ಅಪ್ಪಾಜಿಗೆ ಅಚ್ಚುಮೆಚ್ಚು. ಹಾಗಾಗಿ, ಈ ಊರಿನ ಬಗ್ಗೆ ವಿಶೇಷ ಪ್ರೀತಿ, ಅಭಿಮಾನ ನಮ್ಮೆಲ್ಲರಿಗೂ. ಕ್ಯಾತಸಂದ್ರದ ತಟ್ಟೆಇಡ್ಲಿ ಅಪ್ಪಾಜಿಗೆ ಬಹುಪ್ರಿಯ. ಅವರಂತೆ ನಾವು ತುಮಕೂರಿಗೆ ಬಂದಾಗಲೆಲ್ಲಾ ತಪ್ಪದೇ ತಟ್ಟೆ ಇಡ್ಲಿ ಸೇವಿಸಿಯೇ ಹೋಗುತ್ತೇವೆ ಎಂದು ಹೇಳಿದರು.
ಸಾಹಿತ್ಯ, ಕಲೆ ಉಳಿಸಲು ಬದ್ಧ: ಕನ್ನಡ ಸಾಹಿತ್ಯ, ಕಲೆ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾಯೊರ್ನ್ಮುಖವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆದ ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ಶೋಷಿತರನ್ನು ಮೇಲೆತ್ತುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇದರೊಂದಿಗೆ ಕನ್ನಡ ನಾಡು, ನುಡಿ, ಸಂಸತಿ, ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ದಸರಾ ಮಹೋತ್ಸವವನ್ನು ಆಯೋಜನೆ ಮಾಡಲಾಗಿದೆ. ಕನ್ನಡ ಕರುನಾಡು ಎಂದು ಮಹಾಭಾರತದಲ್ಲೇ ಪ್ರಸ್ತಾಪಿಸಲಾಗಿದೆ. ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸ ಇದೆ. 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ಸಂಗತಿ. ಕನ್ನಡ ಭಾಷೆಯನ್ನು ಶಾಸ್ತ್ರೀಯ ಭಾಷೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಇದೆಲ್ಲವೂ ನಮ್ಮ ಭಾಷೆಯ ಹೆಮ್ಮೆ ಎಂದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆವಹಿಸಿದ್ದರು. ಕನ್ನಿಕಾಪರಮೇಶ್ವರಿ, ಕೇಂದ್ರ ವಲಯ ಐಜಿಪಿ ಲಾಬೂರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ , ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಜಿಪಂ ಸಿಇಒ ಜಿ.ಪ್ರಭು ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಮಿರ್ಜಿ ವಂದಿಸಿದರು.
ತುಮಕೂರು ದಸರಾ ಜನರ ಉತ್ಸವವಾಗಬೇಕು. ತುಮಕೂರು ಉತ್ಸವವಾಗಬೇಕು. ಎಲ್ಲ ವರ್ಗದ ಜನರು ಭಾಗಿಯಾಗುವ ಉತ್ಸವ ಆಗಬೇಕು. ಜಿಲ್ಲೆಯ ಕಲೆ, ಸಂಸತಿ, ಪರಂಪರೆ ಸಾರುವ ಉತ್ಸವ ಆಗಬೇಕು ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದ್ದರು. ಅದರಂತೆ ಜಿಲ್ಲಾಡಳಿತದ ವತಿಯಿಂದ ಅಚ್ಚುಕಟ್ಟಾಗಿ ದಸರಾ ಉತ್ಸವ ಆಚರಣೆ ಮಾಡಲಾಗಿದೆ. ಡಾ.ಜಿ.ಪರಮೇಶ್ವರಗೃಹ ಸಚಿವ
ಶ್ರಮಿಸಿದವರ ಕಡೆಗಣನೆ
ಕಳೆದೊಂದು ತಿಂಗಳಿನಿಂದ ತುಮಕೂರು ದಸರಾ ಉತ್ಸವಕ್ಕೆ ಹಗಲಿರುಳು ಶ್ರಮಿಸಿದ ವಿವಿಧ ಇಲಾಖೆ ಅಧಿಕಾರಿಗಳು, ನೌಕರರನ್ನು ಕಡೆಗಣಿಸಲಾಗಿತ್ತು. ಸಾಂಸತಿಕ ವೈಭವ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಕುಟುಂಬ ಸಮೇತ ಆಗಮಿಸಿದ್ದ ಸಮಿತಿ ಸದಸ್ಯರಿಗಾಗಲೀ, ಅಧಿಕಾರಿಗಳು, ಪತ್ರಕರ್ತರ ಕುಟುಂಬದವರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿತ್ತಾದರೂ ಮಳೆಯಲ್ಲಿ ನೆನೆಯುವಂತಾಯಿತು. ಆದರೆ, ಕಾಂಗ್ರೆಸ್ ಕಾರ್ಯಕರ್ತರು, ಸಚಿವರ ಹಿಂಬಾಲಕರು ಸೇರಿದಂತೆ ಪುಡಾರಿಗಳಿಗೆ ವಿವಿಐಪಿ ಆಸನ ನೀಡಿದ್ದು ಕಾರ್ಯಕ್ರಮ ಯಶಸ್ಸಿಗೆ ದುಡಿದವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಹೆಜ್ಜೆ ಹಾಕಿದ ಪರಂ
ಹುಟ್ಟಿದರೆ ಕನ್ನಡಲ್ಲಿ ನಾಡಲ್ಲಿ ಹುಟ್ಟಬೇಕು ಹಾಡಿಗೆ ಸಚಿವ ಪರಮೇಶ್ವರ ಹೆಜ್ಜೆ ಹಾಕಿದರಲ್ಲದೆ, ಮೈಕ್ ಹಿಡಿದು ಗುರುಕಿರಣ್ ಜತೆ ಹಾಡಿದ್ದು ಗಮನಸೆಳೆಯಿತು. ನವರಾತ್ರಿ ಉತ್ಸವ ಆರಂಭವಾದಗಿನಿಂದಲು ಹೋಮ&ಹವನ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದ ಪರಮೇಶ್ವರ ದಂಪತಿ ಸಂಗೀತ ರಸಸಂಜೆಯಲ್ಲಿ ಮಿಂದೆದ್ದರು.