ಬೆಂಗಳೂರು: ಬೆಂಗಳೂರಿನ ವ್ಯಕ್ತಿಯೊಬ್ಬ ಸಾಮಾಜಿಕ ಮಾಧ್ಯಮಗಳ ಮೂಲಕ ದೂರದರ್ಶನದ ನಟಿಯೊಬ್ಬರಿಗೆ (Television actor) ಅಶ್ಲೀಲ ಸಂದೇಶ ಹಾಗೂ ವಿಡಿಯೋಗಳನ್ನು ಕಳುಹಿಸುತ್ತಿದ್ದಾನೆ ಎಂಬ ಆರೋಪದಡಿ ಆತನನ್ನು ಪೊಲೀಸರು ಬಂಧಿಸಿರುವ ಘಟನೆ ಸೋಮವಾರ (ನ.04) ನಡೆದಿದೆ.
ತೆಲುಗು ಮತ್ತು ಕನ್ನಡ ದೂರದರ್ಶನ ಧಾರಾವಾಹಿಗಳಲ್ಲಿ ಕೆಲಸ ಮಾಡುವ ನಟಿಗೆ ಮೂರು ತಿಂಗಳ ಹಿಂದೆ ಫೇಸ್ಬುಕ್ಬುಕ್ನಲ್ಲಿ ನವೀಂಜ್ ಎಂಬ ಬಳಕೆದಾರರೊಬ್ಬ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ನಟಿಯು ಅದನ್ನು ತಿರಸ್ಕರಿಸಿದರೂ, ಆ ವ್ಯಕ್ತಿ ಪ್ರತಿದಿನ ಮೆಸೆಂಜರ್ ಮೂಲಕ ಅವಳಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದಾನೆ ಎಂದು ತಿಳಿದುಬಂದಿದೆ.
ಆ ನಂತರ ನಟಿಯು ಆ ಬಳಕೆದಾರರನ್ನು ನಿರ್ಭಂದಿಸಿದರೂ, ಆತ ಹಲವಾರು ಹೊಸ ಖಾತೆಗಳನ್ನು ಸೃಷ್ಟಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡುತ್ತಲೇ ಇದ್ದನು. ಹಾಗೆಯೇ ಆ ವ್ಯಕ್ತಿ ಬೇರೆ ಬೇರೆ ಐಡಿಗಳಿಂದ ಅಶ್ಲೀಲ ಸಂದೇಶವನ್ನು ಹಾಗೂ ಖಾಸಗಿ ಭಾಗಗಳ ವಿಡಿಯೋಗಳನ್ನು ಸಹ ಕಳುಹಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ತಿಂಗಳ ಶನಿವಾರ (ನ. 1), ಆ ವ್ಯಕ್ತಿ ಪುನಃ ಸಂದೇಶವನ್ನು ಕಳುಹಿಸಿದ್ದಾನೆ. ಆಗ ನಟಿಯು ಆತನನ್ನು ನಾಗರಭಾವಿ ಎರಡನೇ ಹಂತದ ನಂದನ್ ಪ್ಯಾಲೇಸ್‌ನಲ್ಲಿ ಆತನನ್ನು ಭೇಟಿಯಾಗಲು ಕೇಳಿಕೊಂಡಿದ್ದಾಳೆ. ಆಗ ಆತ ಬರಲು ನಿರಾಕರಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಅಪಾರ್ಟ್ಮೆಂಟ್ ಲಿಫ್ಟ್ನಲ್ಲಿ ಸಾಕು ನಾಯಿಯನ್ನು ಬರ್ಬರವಾಗಿ ಕೊಂದ ಕೆಲಸದಾಕೆ! ವಿಡಿಯೋ ವೈರಲ್.. Dog
ಈ ಪ್ರಕರಣದ ವಿರುದ್ಧ ಮಾಹಿತಿ ಕಲೆ ಹಾಕಿದ ಪೊಲೀಸರು ಆರೊಪಿ ನವೀನ್ ಕೆ ಮೋನ್ ಅನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಆತ ಜಾಗತಿಕ ತಂತ್ರಜ್ಞಾನ ನೇಮಕಾತಿ ಸಂಸ್ಥೆಯಲ್ಲಿ ವಿತರಣಾ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. (ಏಜೆನ್ಸೀಸ್)