ರಾಮನಗರ: ನಟ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ರಾಮನಗರ-ಚನ್ನಪಟ್ಟಣ ನಗರಗಳ ನಡುವಿನ ಪ್ರದೇಶದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಿಶ್ಚಿತಾರ್ಥ ಬೆಂಗಳೂರಿನಲ್ಲಿ ನಡೆದರೂ ಮದುವೆ ಮಾತ್ರ ರಾಮನಗರದಲ್ಲಿ ನಡೆಯಲಿದೆ. ನನಗೆ ರಾಜಕೀಯವಾಗಿ ಜನ್ಮ ನೀಡಿದ ಕ್ಷೇತ್ರದ ಜನರ ಋಣ ತೀರಿಸುವ ಜವಾಬ್ದಾರಿ ಇದ್ದು ರಾಮನಗರ ಹಾಗೂ ಮಂಡ್ಯ ಜಿಲ್ಲೆಯ ಜನರಿಗೆ ಊಟ ಹಾಕಿಸುವ ನಿರ್ಧಾರ ಮಾಡಿದ್ದೆ. ಮಗನ ಮದುವೆಯಲ್ಲಿ ಊಟ ಹಾಕಿಸಿ ಋಣ ತೀರಿಸುತ್ತೇನೆ ಎಂದು ಅವರು ಹೇಳಿದರು.
ಬೃಹತ್ ಪ್ರದೇಶದಲ್ಲಿ ಮದುವೆ ವ್ಯವಸ್ಥೆ ನೆರವೇರಿಸಲಾಗುವುದು. ವಾಹನ ಪಾರ್ಕಿಂಗ್, ಊಟದ ವ್ಯವಸ್ಥೆಗೆ ಅಗತ್ಯವಾದ ಜಾಗ ಹುಡುಕಲಾಗುತ್ತಿದೆ ಎಂದು ಅವರು ಹೇಳಿದರು. (ದಿಗ್ವಿಜಯ ನ್ಯೂಸ್)