ಜಿಲ್ಲೆ

ಕುಮಾರ್​ ಬಂಗಾರಪ್ಪ ಜತೆ ನಟಿಸಿದ್ದ ನಟಿ ಅಮಲಾ ಖ್ಯಾತ ನಟನ ಪತ್ನಿ; ಅಮಲಾ ಪ್ರೀತಿಯಲ್ಲಿ ಬಿದ್ದು ಮೊದಲ ಪತ್ನಿಗೆ ಡಿವೋರ್ಸ್‌ ನೀಡಿದ್ರಾ ಈ ಹೀರೋ?

ಬೆಂಗಳೂರು: ನಟ, ರಾಜಕಾರಣಿಯೂ ಆಗಿರುವ ಕುಮಾರ್​ ಬಂಗಾರಪ್ಪ ಅವರ ಜತೆ ಬೆಳ್ಳಿಯಪ್ಪ ಬಂಗಾರಪ್ಪ, ಬಣ್ಣದ ಗೆಜ್ಜೆ ಸಿನಿಮಾದಲ್ಲಿ ರವಿಚಂದ್ರನ್‌ ಜತೆ ನಟಿಸಿದ್ದ ಅಮಲಾ ನಟನೆಯನ್ನು ಕನ್ನಡ ಸಿನಿರಸಿಕರಿಗೆ ಎಂದಿಗೂ ಮರೆಯಲಾಗುವುದಿಲ್ಲ. ಈ ನಟಿ ಪತಿ ಯಾರು? ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ...

ಅಮಲಾ ಅಕ್ಕಿನೇನಿ ಭಾರತೀಯ ನಟಿ, ಭರತನಾಟ್ಯ ನೃತ್ಯಗಾರ್ತಿ.  ತೆಲುಗು , ಹಿಂದಿ , ಮಲಯಾಳಂ ಮತ್ತು ಕನ್ನಡ ಭಾಷೆಯ ಚಲನಚಿತ್ರಗಳ ಜತೆಗೆ ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  ಬಣ್ಣದ ಗೆಜ್ಜೆ ಸಿನಿಮಾದಲ್ಲಿ ರವಿಚಂದ್ರನ್‌ ಜೊತೆ ನಟಿಸಿದ್ದ ಅಮಲಾ, ಅಗ್ನಿ ಪಂಜರ, ಕ್ಷೀರ ಸಾಗರ, ಬೆಳ್ಳಿಯಪ್ಪ ಬಂಗಾರಪ್ಪ ಸಿನಿಮಾಗಳಲ್ಲಿ ನಟಿಸಿದರು. ಕನ್ನಡದಲ್ಲಿ ಆಕೆ ನಟಿಸಿದ್ದು ಕೆಲವೇ ಸಿನಿಮಾಗಳಾದರೂ ಆಕೆ ಕನ್ನಡಿಗರಿಗೆ ಇಂದಿಗೂ ಚಿರ ಪರಿಚಿತರು.

ಚಿತ್ರರಂಗದಲ್ಲಿ ಸಾಲು ಸಾಲು ಅವಕಾಶಗಳಿದ್ದರೂ ಅಮಲಾ, ಅಕ್ಕಿನೇನಿ ನಾಗಾರ್ಜುನ ಕೈ ಹಿಡಿದ ನಂತರ ಸಿನಿಮಾದಿಂದ ದೂರ ಸರಿದಿದ್ದರು.  ಅಕ್ಕಿನೇನಿ ಕುಟುಂಬದ ಸೊಸೆಯಾಗುವ ಮುನ್ನ ಅಮಲಾ ಮುಖರ್ಜಿ ಆಗಿದ್ದರು. ಅವರ ತಂದೆ ನೌಕಾಪಡೆಯಲ್ಲಿ ಅಧಿಕಾರಿ. ಅವರ ತಾಯಿ ಐರಿಶ್. 1967 ರ ಸೆಪ್ಟೆಂಬರ್ 12 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಅದರ ನಂತರ, ಅವರ ತಂದೆಯನ್ನು ವರ್ಗಾಯಿಸಲಾಯಿತು. ಅವರ ಕುಟುಂಬವನ್ನು ಮದ್ರಾಸ್ ಪ್ರೆಸಿಡೆನ್ಸಿಗೆ ಸ್ಥಳಾಂತರಿಸಲಾಯಿತು.  ತಮಿಳಿನ ಜೊತೆಗೆ ತೆಲುಗಿನಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ನಾಗಾರ್ಜುನ ಅವರ ಮೊದಲ ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ.

ಲಕ್ಷ್ಮಿ ದಗ್ಗುಬಾಟಿ (ರಾಣಾ ದಗ್ಗುಬಾಟಿ ಅತ್ತೆ) ಯನ್ನು ನಾಗಾರ್ಜುನ 1984 ರಲ್ಲಿ ಮದುವೆ ಆಗಿದ್ದರು. ಆದರೆ ಈ ಜೋಡಿ 6 ವರ್ಷಗಳ ನಂತರ ಡಿವೋರ್ಸ್‌ ಪಡೆದರು. ಆಗ ನಾಗಚೈತನ್ಯಗೆ 4 ವರ್ಷ ವಯಸ್ಸು. 80 ರ ದಶಕದಲ್ಲಿ ಅಮಲಾ ಹಾಗೂ ಅಕ್ಕಿನೇನಿ ನಾಗಾರ್ಜುನ ಕಿರಾಯಿ ದಾದಾ, ಚಿನ್ನಬಾಬು, ಶಿವ, ಪ್ರೇಮ ಯುದ್ಧಂ, ಸಂಭವಮ್‌ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಆನ್‌ ಸ್ಕ್ರೀನ್‌ ಕೆಮಿಸ್ಟ್ರಿ ಜೊತೆಗೆ ಅಮಲಾ ಹಾಗೂ ನಾಗಾರ್ಜುನ್‌ ರಿಯಲ್‌ ಲೈಫ್‌ನಲ್ಲಿ ಕೂಡಾ ಒಬ್ಬರಿಗೊಬ್ಬರು ಆಕರ್ಷಿತರಾದರು. ಚಿತ್ರದಲ್ಲಿ ನಟಿಸುತ್ತಿರುವಾಗಲೇ 1992ರ ಜೂನ್ 11ರಂದು ತಿರುಪತಿಯಲ್ಲಿ ಮದುವೆಯಾದರು.

ನಾಗಾರ್ಜುನ್‌ ಮೊದಲ ಮದುವೆ ಮುರಿಯಲು, ಅಮಲಾ ಜೊತೆಗಿನ ಪ್ರೀತಿಯೇ ಕಾರಣ ಎಂಬ ಮಾತು ಇಂದಿಗೂ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.  ಅಕ್ಕಿನೇನಿ ನಾಗಾರ್ಜುನ ಜತೆ ಪ್ರೀತಿಯಲ್ಲಿದ್ಧಾಗ ಅದಾಗಲೇ ನಾಗಾರ್ಜುನಗೆ ಮದುವೆ ಆಗಿ ನಾಗ ಚೈತನ್ಯ ಕೂಡಾ ಜನಿಸಿದ್ದರು. ಆದರೆ ಅಮಲಾ ಪ್ರೀತಿಯ ಅಮಲಿಗೆ ಬಿದ್ದ ನಾಗಾರ್ಜುನ ಮೊದಲ ಪತ್ನಿಯಿಂದ ದೂರಾದರು ಎಂಬ ಗಾಸಿಪ್‌ ಇದೆ.

1992ರಲ್ಲಿ ಅಮಲಾ ಹಾಗೂ ನಾಗಾರ್ಜುನ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಮದುವೆ ಆದರು. 1994 ರಲ್ಲಿ ಈ ದಂಪತಿಗೆ ಅಖಿಲ್‌ ಅಕ್ಕಿನೇನಿ ಜನಿಸಿದರು.  ಅಖಿಲ್‌ ಅಕ್ಕಿನೇನಿ ಕೂಡಾ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.  ತಂದೆ ತಾಯಿ ದೂರ ದೂರ ಇದ್ದರೂ ನಾಗಚೈತನ್ಯ, ಅಮಲಾ ಹಾಗೂ ಅಖಿಲ್‌ ಜತೆ ಒಳ್ಳೆ ರಿಲೇಷನ್‌ಶಿಪ್‌ ಇದೆ.

ಅಮಲಾ ಅಕ್ಕಿನೇನಿ ಒಬ್ಬ ಹೀರೋ ಹೆಂಡತಿಯಾಗಿ, ಸ್ಟಾರ್ ಸೊಸೆಯಾಗಿ ಮತ್ತೊಬ್ಬ ಹೀರೋ ತಾಯಿಯಾಗಿ ವಿಶಿಷ್ಟವಾದ ಐಡೆಂಟಿಟಿ ಪಡೆದಿದ್ದಾರೆ ಈ ನಟಿ.  ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ಅವರು ಮೂಕರಿಗಾಗಿ ಬ್ಲೂ ಕ್ರಾಸ್ ಸ್ಥಾಪಿಸಿದ್ದಾರೆ.  ನಾಗಾರ್ಜುನ ಮತ್ತು ಅಮಲಾಡಿ ಬೆಳ್ಳಿತೆರೆಯಲ್ಲಿ ಅಚ್ಚಳಿಯದ ಜೋಡಿ. ಈ ಇಬ್ಬರು ಮೊದಲು ಆನ್-ಸ್ಕ್ರೀನ್‌ನಲ್ಲಿ ಭೇಟಿಯಾದರು ಮತ್ತು ನಂತರ ಆಫ್-ಸ್ಕ್ರೀನ್‌ನಲ್ಲಿ ವಿವಾಹವಾಗಿ ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ.