ಜಿಲ್ಲೆ

ವಿಷ್ಣುವರ್ಧನ್ ಸಮಾಧಿ ಮರು ನಿರ್ಮಿಸಿ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ನಟ ಡಾ.ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಮಾಡಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಸಮಾಧಿ ಮರು ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಚಿತ್ರದುರ್ಗ ವಿಷ್ಣು ಸೇನಾ ಸಮಿತಿ ಸದಸ್ಯರು ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಸಮಾಧಿ ಧ್ವಂಸದಿಂದ ಕನ್ನಡಿಗರ ಮನಸ್ಸಿಗೆ ಆಘಾತ ಉಂಟಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರವೇ ಮುಂದೆ ನಿಂತು ಸಮಾಧಿ ಮರು ನಿರ್ಮಾಣ ಮಾಡಬೇಕು. ಮರಣೋತ್ತರವಾಗಿ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಬೇಕೆಂದು ಒತ್ತಾಯಿಸಿದರು.

ಸಮಿತಿ ಅಧ್ಯಕ್ಷ ಆರ್.ರಮೇಶ್ ಮದಕರಿಪುರ, ಎ.ಸಾದಿಕ್‌ವುಲ್ಲಾ, ಸಿ.ಯೋಗೇಶ್, ಎನ್.ರಾಮಪ್ಪ ಪಿಳ್ಳೇಕೆರೆನಹಳ್ಳಿ, ರವಿಕುಮಾರ್ ಕವಾಡಿಗರಹಟ್ಟಿ, ಮಣಿಕಂಠ, ಮಾದೇವಾಚಾರಿ, ಶಿವಲಿಂಗಪ್ಪ, ಶ್ರೀರಾಮ್, ಡಿ.ಕುಮಾರಸ್ವಾಮಿ, ಎಂ.ಡಿ.ಉಸ್ಮಾನ್ ಇದ್ದರು.