ಡಂಬಳ: ಐತಿಹಾಸಿಕ ಹಿನ್ನೆಲೆಯ ಡಂಬಳ ಕೆರೆ ಭರ್ತಿಯಾದರೆ ಸಾವಿರಾರು ರೈತರ ಜಮೀನುಗಳಿಗೆ ನೀರು ಸಿಗಲಿದೆ. ಕೆರೆಯ ಕೆಲ ಭಾಗ ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಗ್ರಾಮಕ್ಕೆ ಬುಧವಾರ ಭೇಟಿ ನೀಡಿ ಕೆರೆ ಪರಿಶೀಲಿಸಿ ಅವರು ಮಾತನಾಡಿದರು. ಮೂರು ಗೇಟ್‌ಗಳಲ್ಲಿ ಸಮಾನಾಂತರವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಿಸುವ ಕುರಿತು ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಶೀಘ್ರದಲ್ಲಿ ಯೋಜನೆ ರೂಪಿಸಲಾಗುವುದು ಎಂದರು.
ಶಿಂಗಟಾಲೂರ ಏತ ನೀರಾವರಿ ಯೋಜನೆಯಡಿ ಬೃಹತ್ ಕಾಲುವೆ ಮೂಲಕ ಕೆರೆಗೆ ಶೀಘ್ರದಲ್ಲಿ ನೀರು ಭರ್ತಿ ಮಾಡುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಡಂಬಳ ಜಂಧಿಸಾಬ ಕೆರೆ ಹತ್ತಿರದ ರಸ್ತೆ ಹಾಗೂ ದೊಡ್ಡಬಸವೇಶ್ವರ ದೇವಸ್ಥಾನದ ಹತ್ತಿರದ ಗದಗ-ಮುಂಡರಗಿ ರಸ್ತೆ ದುರಸ್ತಿ ಮಾಡಲಾಗುವುದು ಎಂದರು.
ಮಂಜುನಾಥ ಹೊಸಮನಿ, ಶರಣು ಪೂಜಾರ, ಗೋಣಿಬಸಪ್ಪ ಕೊರ್ಲಹಳ್ಳಿ, ಬಸವರಡ್ಡಿ ಬಂಡಿಹಾಳ, ಯುಸೂಫ್ ಇಟಗಿ, ಮಹೇಶ ಗಡಗಿ, ಗವಿಸಿದ್ದಪ್ಪ ಬಿಸನಹಳ್ಳಿ, ಸುರೇಶ ಗಡಗಿ, ಬಸವರಾಜ ಪೂಜಾರ, ಮರಿಯಪ್ಪ ಸಿದ್ದಣ್ಣವರ, ಶರಣು ಬಂಡಿಹಾಳ, ಜಾಕೀರ ಮೂಲಿಮನಿ, ಮಲ್ಲಿಕಾರ್ಜುನ ಪ್ಯಾಟಿ, ಶಂಕ್ರಪ್ಪ ಗಡಗಿ, ನಾಗೇಶ ಧರ್ಮಾಧಿಕಾರಿ, ಇತರರಿದ್ದರು.