ಜಿಲ್ಲೆ

ಜಿಂಕೆಗಳ ಹಾವಳಿ ತಡೆಗೆ ಕ್ರಮಕೈಗೊಳ್ಳಲಿ

ಕುಂದಗೋಳ: ತಾಲೂಕಿನ ಗುಡೇನಕಟ್ಟಿ, ಅಲ್ಲಾಪೂರ, ಕಡಪಟ್ಟಿ, ಮುಳ್ಳೊಳ್ಳಿ, ಯರಿನಾರಾಯಣಪುರ ಗ್ರಾಮಗಳ ರೈತರ ಜಮೀನಿನಲ್ಲಿ ಜಿಂಕೆಗಳ ಹಾವಳಿ ತಡೆಯಲು ಕ್ರಮಕೈಗೊಳ್ಳುವಂತೆ ರತ್ನ ಭಾರತ ರೈತ ಸಮಾಜದ ಪದಾಧಿಕಾರಿಗಳು ಗುರುವಾರ ತಹಸೀಲ್ದಾರ್ ಎಸ್.ಎಸ್. ಪರಮಾನಂದ ಅವರಿಗೆ ಮನವಿ ಸಲ್ಲಿಸಿದರು.

ಮುಂಗಾರಿನ ಮಳೆ ತಡವಾಗಿದ್ದರಿಂದ ತೇವಾಂಶದ ಕೊರತೆಯಿಂದ ಬಿತ್ತನೆ ತಡವಾಗಿದೆ. ಬೆಳೆಗಳು ನೆಲ ಬಿಟ್ಟು ಮೇಲೆಳದೇ ಇರುವಾಗ ಹಳ್ಳ- ಕೊಳ್ಳಗಳಿಂದ ಜಿಂಕೆಗಳು ತಂಡೋಪತಂಡವಾಗಿ ಅಲ್ಲಲ್ಲಿ ಶೇಂಗಾ, ಹೆಸರು, ಹತ್ತಿ, ಸೋಯಾಬೀನ್, ಮೆಣಸಿನಗಿಡ, ತೊಗರಿ ಬೆಳೆಗಳನ್ನು ನಾಶ ಮಾಡುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ರತ್ನ ಭಾರತ ರೈತ ಸಮಾಜದ ಅಧ್ಯಕ್ಷ ಹೇಮನಗೌಡ ಬಸನಗೌಡ ಮನವಿ ಮಾಡಿದರು.

ಬಸವರಾಜ ಯೋಗಪ್ಪನವರ, ಗೋಪಾಲ ದೊಡ್ಡಮನಿ, ಬಸವರಾಜ ತಾಯಿತಂದೆ, ಚನ್ನಯ್ಯ ಪೂಜಾರ, ಇತರರಿದ್ದರು.