ಸಂಡೂರು ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗೃಹರಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್ ಉದ್ಘಾಟಿಸಿದರು. ಕಂಪನಿ ಕಮಾಂಡರ್ ಜಿ.ಸುರೇಶ, ನಿವೃತ್ತ ಯೋಧ ಮಂಜುನಾಥ ಸುಶೀಲಾನಗರ, ಸಂಡೂರು ಘಟಕ ಅಧಿಕಾರಿ ನರಿ ಮಲ್ಲಿಕಾರ್ಜುನ, ಹೊಸಪೇಟೆ ಘಟಕದ ಗಿರೀಶ್, ವಾಲ್ಯಾನಾಯ್ಕಾ, ಪರಶುರಾಮ್, ತೋರಣಗಲ್ಲು ಘಟಕ ಅಧಿಕಾರಿ ನರಿ ವಿರುಪಾಕ್ಷಿ, ಪ್ರಮುಖರಾದ ಕುಡುತಿನಿ ಗೋವರ್ಧನ, ಸಂತೋಷ್ ಇತರರಿದ್ದರು. 
ಜಿಲ್ಲೆ

ಗೃಹರಕ್ಷಕರಿಗೆ ಕಚೇರಿ ಒದಗಿಸಲು ಕ್ರಮ

ರುದ್ರಪ್ಪ ವಾಲಿ

ಸಂಡೂರು: ಗೃಹ ರಕ್ಷಕರು ಸಮಾಜಕ್ಕೆ ನೀಡುವ ಸೇವೆ ದೊಡ್ಡದು ಎಂದು ಪುರಸಭೆ ಅಧ್ಯಕ್ಷ ಎಸ್.ಸಿರಾಜ್ ಹುಸೇನ್ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗೃಹ ರಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗೃಹರಕ್ಷಕರ ಕಚೇರಿ ಒದಗಿಸಲು ಮನವಿ ಮಾಡಿದ್ದು, ಈ ಬಗ್ಗೆ ಶಾಸಕರು, ಸಂಸದರೊಂದಿಗೆ ಚರ್ಚಿಸಲಾಗುವುದು ಎಂದರು.

ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಸಹಾಯಕ ಕ್ರೀಡಾನಿರ್ದೇಶಕ ಆರ್.ಶಿವರಾಮ್ ಮಾತನಾಡಿ, ಗೃಹರಕ್ಷಕರ ದುಡಿಮೆಗೆ ತಕ್ಕ ವೇತನವಿಲ್ಲ. ವಿದ್ಯೆ, ಅರ್ಹತೆ, ದೈಹಿಕ ಕ್ಷಮತೆ ಇದ್ದರೂ ಸರ್ಕಾರದ ಸವಲತ್ತು ಪಡೆಯುವಲ್ಲಿ ಸಾಕಷ್ಟು ಹಿಂದುಳಿದಿದ್ದಾರೆ.

ಇಂದು ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಕನಿಷ್ಠ 30 ಸಾವಿರಕ್ಕೂ ಹೆಚ್ಚು ವೇತನ ಅವಶ್ಯಕ. ಗೃಹರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವವರು ದೈಹಿಕವಾಗಿ ಮತ್ತು ಶೈಕ್ಷಣಿಕವಾಗಿ ಪೋಲಿಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಅರ್ಹರಾಗಿದ್ದಾರೆ. ಅವರನ್ನು ಕೂಡ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದರು.