ಸದಸ್ಯರಿಗೆ ಮಾಹಿತಿ ನೀಡದೆ ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ ಎಂದು ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ದೇವದುರ್ಗ ತಾಲೂಕು ಪಲಕನಮರಡಿ ಗ್ರಾ.ಪಂ. ಸದಸ್ಯರು ದೂರು ನೀಡಿದರು. ಗ್ರಾ.ಪಂ. ಸದಸ್ಯರಾದ ಹನುಮಗೌಡ ಮದರಕಲ್, ಶಿವರಾಜ ಪೊಲೀಸ್ ಪಾಟೀಲ್, ಅಮರೇಶ ಪೊಲೀಸ್ ಪಾಟೀಲ್, ಸಂಗಮ್ಮ, ಸೋಮಲಿಂಗಮ್ಮ, ಮಲ್ಲಮ್ಮ, ಚಾಂದ್‌ಪಾಷಾ, ಮಾನಯ್ಯ ಇದ್ದರು. 
ಜಿಲ್ಲೆ

ಸದಸ್ಯರಿಗೆ ಮಾಹಿತಿಯಿಲ್ಲದೆ ಕ್ರಿಯಾ ಯೋಜನೆ

ರಾಚಯ್ಯ ಸ್ವಾಮಿ

ರಾಯಚೂರು: ದೇವದುರ್ಗ ತಾಲೂಕಿನ ಪಲಕನಮರಡಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ತಡೆಯಾಜ್ಞೆಯಿರುವುದರಿಂದ ಆಡಳಿತಾಕಾರಿಯನ್ನು ನೇಮಕ ಮಾಡಲಾಗಿದ್ದು, ಸದಸ್ಯರಿಗೆ ಮಾಹಿತಿ ನೀಡದೆ ಕೆಲವರು ಅಕಾರಿಗಳನ್ನು ಬೆದರಿಸಿ ಕ್ರಿಯಾ ಯೋಜನೆ ರೂಪಿಸಲು ಮುಂದಾಗಿದ್ದಾರೆ ಎಂದು ಗ್ರಾ.ಪಂ. ಸದಸ್ಯರು ಆರೋಪಿಸಿದ್ದಾರೆ.
ಸದಸ್ಯರ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಶುಕ್ರವಾರ ಮನವಿ ಸಲ್ಲಿಸಿ, ಅಧ್ಯಕ್ಷ, ಉಪಾಧ್ಯಕ್ಷರಿಲ್ಲದ ಕಾರಣ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಂತಾಗಿದ್ದು, ಆಡಳಿತಾಕಾರಿಗೆ ಆರ್ಥಿಕ ನಿರ್ಣಯ ಕೈಗೊಳ್ಳಲು ಅವಕಾಶವಿಲ್ಲದ್ದರಿಂದ ಸಮಸ್ಯೆಯಾಗಿದೆ ಎಂದು ದೂರಿದರು.
ಗ್ರಾ.ಪಂ. ವ್ಯಾಪ್ತಿಯಲ್ಲಿ 11 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, 27 ಲಕ್ಷ ರೂ. ವೆಚ್ಚದ ಜಲ ಜೀವನ್ ಮಿಷನ್ ಸೇರಿದಂತೆ ಹಲವು ಯೋಜನೆಗಳಿದ್ದರೂ ಗ್ರಾಮಸ್ಥರಿಗೆ ಸಮರ್ಪಕ ಕುಡಿಯುವ ನೀರು ಕೊಡಲಾಗುತ್ತಿಲ್ಲ.
ಕಾಮಗಾರಿಗಳು ಅಪೂರ್ಣವಾಗಿದ್ದು, ರಸ್ತೆ ಸೇರಿದಂತೆ ಇನ್ನಿತರ ಕಾರ್ಯಗಳು ನಡೆಯದಂತಾಗಿದೆ. 15ನೇ ಹಣಕಾಸು ಮತ್ತು ಉದ್ಯೋಗ ಖಾತ್ರಿ ಯೋಜನೆ ರೂಪಿಸುವಂತೆ ಆಡಳಿತಾಕಾರಿ ಮತ್ತು ಪಿಡಿಒ ಮೇಲೆ ಒತ್ತಡ ಹಾಕಲಾಗುತ್ತಿದೆ. ವಿನಾಕಾರಣ ಕಂಪ್ಯೂಟರ್ ಆಪರೇಟರ್‌ನ್ನು ತೆಗೆದು ಹಾಕಲಾಗಿದೆ. ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಪಲಕನಮರಡಿ ಗ್ರಾ.ಪಂ. ಸದಸ್ಯರಾದ ಹನುಮಗೌಡ ಮದರಕಲ್, ಶಿವರಾಜ ಪೊಲೀಸ್ ಪಾಟೀಲ್, ಅಮರೇಶ ಪೊಲೀಸ್ ಪಾಟೀಲ್, ಸಂಗಮ್ಮ, ಸೋಮಲಿಂಗಮ್ಮ, ಲಂಕೆಪ್ಪ ವಂದಲಿ, ಹನುಮಂತಿ, ಮಲ್ಲಮ್ಮ, ಚಾಂದ್‌ಪಾಷಾ, ಚನ್ನಮ್ಮ, ಮಾನಯ್ಯ, ರೇಣುಕಮ್ಮ ಇದ್ದರು.