ಬೋರಗಾಂವ: ಅಮೃತ್ ೨ ನೀರಿನ ಯೋಜನೆ ಪೂರ್ಣಗೊಂಡ ನಂತರ ಪಟ್ಟಣದ ಎಲ್ಲ ರಸ್ತೆ ಡಾಂಬರೀಕರಣ ಮಾಡಲಾಗುವುದು. ಇದಕ್ಕಾಗಿ ವಿಶೇಷ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಭೇಟಿ ಮಾಡಲಿದ್ದೇವೆ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿಯ ಎಸ್‌ಎಫ್‌ಸಿ ಅನುದಾನಡಿ ಮಂಜೂರಾದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಜಾತಿ ರಾಜಕೀಯ ಮಾಡದೇ ಅಭಿವೃದ್ಧಿ ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಕಾರ್ಯಕರ್ತರೇ ನಮ್ಮ ಬೆಂಬಲಿಗರು ಎಂದರು.
ಪಂಚಾಯಿತಿ ಸದಸ್ಯ ಅಭಯಕುಮಾರ ಮಗದುಮ ಮಾತನಾಡಿ, ವಾರ್ಡ್ ಸಂಖ್ಯೆ ೧೦ ರಲ್ಲಿ ಅಂಬೇಡ್ಕರ್ ಸಮುದಾಯ ಭವನ ಕಾಂಪೌಂಡ್ ನಿರ್ಮಾಣಕ್ಕಾಗಿ ೬.೫೨ ಲಕ್ಷ ರೂ., ವಾರ್ಡ್ ಸಂಖ್ಯೆ ೧೭ ಮತ್ತು ೬ ರಲ್ಲಿ ರಸ್ತೆ ಡಾಂಬರೀಕರಣಕ್ಕೆ ೧೯ ಲಕ್ಷ ರೂ. ಮತ್ತು ವಾರ್ಡ್ ಸಂಖ್ಯೆ ೬, ೯ ರಲ್ಲಿ ಮುಖ್ಯರಸ್ತೆ ಡಾಂಬರೀಕರಣಕ್ಕೆ ೩೫ ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದರು.
ಪಪಂ ಸದಸ್ಯ ದಿಗಂಬರ ಕಾಂಬಳೆ ಮಾತನಾಡಿದರು.
ಉಪಾಧ್ಯಕ್ಷೆ ಭಾರತಿ ವಾಸವಾಡೆ, ರಾಜು ಮಗದುಮ, ಅಶೋಕ ಪಾಟೀಲ, ಪೀರಗೌಡ ಪಾಟೀಲ, ರಾಜು ಗಜರೆ, ರಾಜು ಶಿಂಗೆ, ಉಮೇಶ ಕಾಂಬಳೆ, ವಿಲಾಸ ಕಾಂಬಳೆ, ತುಷಾರ ಕಾಂಬಳೆ, ಅಮರ್ ಸಿಂಗೆ, ರಮೇಶ ಕುರಳೆ, ಅಶ್ವಿನ್ ಮಾನವಿ, ಭೂಷಣ ಮಧಾಳೆ, ಸಿಕಂದರ್ ಕಾಂಬಳೆ, ಬಬ್ಲು ಕಾಂಬಳೆ, ರಾಜು ಕಾಂಬಳೆ, ಶಂಭು ಕಾಂಬಳೆ, ದೀಪಕ ಹಿರೇಮನಿ, ಸಾಗರ ಮಧಾಳೆ, ಅಣ್ಣಾಸಾಹೇಬ ಹಿರೇಮನಿ ಇತರರಿದ್ದರು.