ರಾಯಚೂರಿನ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಕಾರಿ ಅಶೋಕ ದುಡಗುಂಟಿ ಅಧ್ಯಕ್ಷತೆಯಲ್ಲಿ ಲೋಕಸಭೆ ಚುನಾವಣೆ ಕುರಿತು ಭಾನುವಾರ ರಾಜಕೀಯ ಪಕ್ಷಗಳ ಮುಖಂಡರ ಸಭೆ ಜರುಗಿತು. ಚುನಾವಣೆ ಶಿರಸ್ತೇದಾರ ರಿಷಿಕೇಶ, ತಾಂತ್ರಿಕ ಅಕಾರಿ ಶಿವಕುಮಾರ, ರಾಜಕೀಯ ಪಕ್ಷಗಳ ಮುಖಂಡರಾದ ಕೆ.ತಿರುಮಲರೆಡ್ಡಿ, ಶಂಕರ ಕಲ್ಲೂರ, ರವಿಕುಮಾರ ಇದ್ದರು. 
ಜಿಲ್ಲೆ

ಪೂರ್ವಾನುಮತಿ ಪಡೆಯದೆ ಪ್ರಚಾರ ನಡೆಸಿದರೆ ಕ್ರಮ

ರಾಯಚೂರು: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೊಂಡಿರುವುದರಿಂದ ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರ, ವಾಹನ, ಕರಪತ್ರಗಳ ವಿತರಣೆ ಸೇರಿದಂತೆ ಎಲ್ಲವನ್ನೂ ಚುನಾವಣೆ ಆಯೋಗದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಅಪರ ಜಿಲ್ಲಾಕಾರಿ ಹಾಗೂ ಸಹಾಯಕ ಚುನಾವಣಾಕಾರಿ ಅಶೋಕ ದುಡಗುಂಟಿ ತಿಳಿಸಿದರು.
ಸ್ಥಳೀಯ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಜರುಗಿದ ರಾಜಕೀಯ ಪಕ್ಷಗಳ ಮುಖಂಡರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರ, ಸಭೆಗಳನ್ನು ಆಯೋಗದ ನಿರ್ದೇಶನದಂತೆ ನಡೆಸಬೇಕು.
ನಿಗದಿತ ನಮೂನೆಯಲ್ಲಿ ಅರ್ಜಿ ನೀಡಿ ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಪರವಾನಗಿ ಪಡೆಯಬೇಕು. ಹೆಲಿಕ್ಯಾಪ್ಟರ್ ಬಳಕೆ, ಧ್ವನಿವರ್ಧಕ, ಕರಪತ್ರ, ಪಕ್ಷದ ಕಚೇರಿ ಸ್ಥಾಪನೆ ಕುರಿತು ಕಚೇರಿಗೆ ಕಾಲ ಕಾಲಕ್ಕೆ ಮಾಹಿತಿ ನೀಡಬೇಕು. ನಿಯಮ ಉಲ್ಲಂಸಿದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅಶೋಕ ದುಡಗುಂಟಿ ತಿಳಿಸಿದರು.
ಸಭೆಯಲ್ಲಿ ಚುನಾವಣೆ ಶಿರಸ್ತೇದಾರ ರಿಷಿಕೇಶ, ತಾಂತ್ರಿಕ ಅಕಾರಿ ಶಿವಕುಮಾರ, ರಾಜಕೀಯ ಪಕ್ಷಗಳ ಮುಖಂಡರಾದ ಕೆ.ತಿರುಮಲರೆಡ್ಡಿ, ಶಂಕರ ಕಲ್ಲೂರ, ರವಿಕುಮಾರ ಉಪಸ್ಥಿತರಿದ್ದರು.