ಜಿಲ್ಲೆ

ದುಬಾರಿ ಬಡ್ಡಿ ದರ ಪಡೆದರೆ ಕ್ರಮ

* ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹೇಳಿಕೆ

* ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳಿಗೆ ಎಚ್ಚರಿಕೆ

ರಾಮನಗರ

ಸಾಲ ವಸೂಲಾತಿ ಸಂದರ್ಭಗಳಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ ಕಿರುಕುಳ ಹಾಗೂ ಬಲವಂತದ ಕ್ರಮಗಳಿಂದ ಆಗುತ್ತಿರುವ ಅನಾಹುತ, ದುರ್ಟನೆಗಳನ್ನು ನಿಯಂತ್ರಿಸಲು ಜಾರಿಗೊಂಡಿರುವ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆಧ್ಯಾದೇಶ - 2025 ಅನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಅದನ್ನು ಉಲ್ಲಂಸಿದ್ದಲ್ಲಿ ಜಿಲ್ಲಾಡಳಿತದಿಂದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ವಾತನಾಡಿ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋಫೈನಾನ್ಸ್ ಕಂಪನಿಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು ನೀಡುವ ದುಬಾರಿ ಬಡ್ಡಿ ದರಗಳ ಅನುಚಿತ ತೊಂದರೆ ಮತ್ತು ಬಲವಂತದ ವಸೂಲಾತಿ ವಿಧಾನಗಳಿಂದ ಆರ್ಥಿಕವಾಗಿ ದುರ್ಬಲ ಗುಂಪು ಮತ್ತು ವ್ಯಕ್ತಿಗಳು ವಿಶೇಷವಾಗಿ ರೈತರು, ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ರಕ್ಷಿಸಲು ಈ ಆಧ್ಯಾದೇಶವನ್ನು ಜಾರಿಗೊಳಿಸಲಾಗಿದೆ ಎಂದರು.

ನೂತನ ಆದೇಶದಂತೆ ಆರ್‌ಬಿಐಯಡಿ ನೋಂದಣಿಯಾಗಿರುವ ಹಣಕಾಸು ಸಂಸ್ಥೆಗಳು ಬರುವುದಿಲ್ಲ, ನೋಂದಣಿಯಾಗಿರುವ ಸಂಸ್ಥೆಗಳು ಸಾಲ ವಸೂಲಾತಿಯನ್ನು ಆರ್‌ಬಿಐನ ನಿಯಮಗಳನ್ವಯವಷ್ಟೇ ವಸೂಲಿ ವಾಡಬೇಕು, ಉಲ್ಲಂನೆ ಕಂಡುಬಂದಲ್ಲೀ ಕಾನೂನು ಪ್ರಕಾರ ದೂರು ದಾಖಲಿಸಬಹುದಾಗಿದೆ ಎಂದವರು ತಿಳಿಸಿದರು.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋಫೈನಾನ್ಸ್ ಕಂಪನಿಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿದಾರರು ಕಡ್ಡಾಯವಾಗಿ 30ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ವಾಡಿಕೊಳ್ಳಬೇಕು. ಈ ಪ್ರಕ್ರಿಯೆಗೆ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗುವುದು ಹಾಗೂ ಅರ್ಜಿ ನಮೂನೆಯನ್ನು ನೀಡಲಾಗುವುದು. ಸಾಲಗಾರರ ಹೆಸರು, ವಿಳಾಸ, ಅವರಿಗೆ ನೀಡಲಾದ ಅಸಲು, ಈಗಾಗಲೇ ವಸೂಲಿ ವಾಡಲಾದ ಮೊತ್ತ, ಬಾಕಿ ಮೊತ್ತ, ನೂತನ ಆಧ್ಯಾದೇಶದ ಅನುಸಾರ ಕಾರ್ಯನಿರ್ವಹಿಸತಕ್ಕದ್ದೆಂಬ ಲಿಖಿತ ಮುಚ್ಚಳಿಕೆ ಸೇರಿ ಅಗತ್ಯ ವಾಹಿತಿ ಪಡೆಯಲಾಗುವುದು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ವಾತನಾಡಿ, ಸಾಲ ವಸೂಲಾತಿಗೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಾಗೂ ಲೇವಾದೇವಿದಾರರು ಬಲವಂತದ ಕ್ರಮದಲ್ಲಿ ತೊಡಗಬಾರದು, ಸಂಜೆ 6 ಗಂಟೆಯ ನಂತರ ಮನೆ ಹತ್ತಿರ ಹೋಗಿ ಕಿರುಕುಳ ನೀಡಬಾರದು. ಈ ರೀತಿಯ ಪ್ರಕರಣವೊಂದರಲ್ಲಿ ಎಫ್‌ಐಆರ್ ದಾಖಲು ವಾಡಲಾಗಿದೆ, ನೀಡಿರುವ ಸಾಲವನ್ನು ವಸೂಲಿ ವಾಡಬೇಡಿ ಎಂದು ಹೇಳುತ್ತಿಲ್ಲ, ಆದರೆ, ಸಾಲ ವಸೂಲಾತಿಗೆ ಇರುವ ಕ್ರಮಗಳನ್ನಷ್ಟೇ ಬಳಸಬೇಕು, ಸಾಲ ವಸೂಲಿಗೆ ನೋಂದಾಯಿಸಿದ ಅಂಚೆಯ ಮೂಲಕ ಸಂಬಂಧಿಸಿದವರಿಗೆ ವಾಹಿತಿ ನೀಡಿ, ಅದನ್ನು ಬಿಟ್ಟು ಸಂಬಂಧಿಸಿದವರ ಮನೆಗೆ ಹೋಗಿ ಬೈಕ್ ತರುವುದು, ಅವರ ಎಮ್ಮೆ, ಹಸುಗಳನ್ನು ತರುವುದು, ಸಾಲ ಪಡೆದವರ ಭಾವಚಿತ್ರವನ್ನು ದುರ್ಬಳಕೆ ವಾಡುವುದು, ಮೊಬೈಲ್‌ನಲ್ಲಿ ಅಶ್ಲೀಲವಾಗಿ ವಾತನಾಡುವ ಕೃತ್ಯಗಳನ್ನು ಎಸಗಬಾರದು, ಅದೇ ರೀತಿ ಗುಂಪು ಸಾಲ ನೀಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಿಯವಾನುಸಾರ ಕ್ರಮವಹಿಸಬೇಕು, ಕಾನೂನಿನ ಕ್ರಮವಹಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಸಹಕಾರ ಸಂಗಳ ಉಪ ನಿಬಂಧಕರಾದ ಕವಿತಾ, ಲೀಡ್ ಬ್ಯಾಂಕ್ ವ್ಯಾನೇಜರ್ ಪ್ರಭು, ಎಂ.ಎಫ್.ಐನ ರಾಜ್ಯ ಪ್ರತಿನಿಧಿ ಲೋಕೇಶ್, ತಹಸೀಲ್ದಾರ್‌ಗಳು, ಮೈಕ್ರೋಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು, ಲೇವಾದೇವಿದಾರರು ಹಾಗೂ ಸಂಬಂಧಿಸಿದವರು ಸಭೆಯಲ್ಲಿ ಇದ್ದರು.

ಮೊದಲಿಗೆ ನೈತಿಕ ದಷ್ಟಿಕೋನದಿಂದ ಸಾಲ ವಸೂಲಿಗೆ ಕ್ರಮವಹಿಸಿ, ಸಂಜೆ 6 ಗಂಟೆಯ ನಂತರ ಸಾಲಗಾರರ ಮನೆಗೆ ಹೋಗಿ ಕಿರುಕುಳ ನೀಡುವುದು, ರೌಡಿ ಶೀಟರ್‌ಗಳನ್ನು ಬಳಸುವುದು, ಬಿಳಿ ಕಾಗದದ ಮೇಲೆ ಸಹಿ ಪಡೆಯುವಂತ ಕತ್ಯಗಳನ್ನು ವಾಡಬಾರದು, ಸಾಲ ವಸೂಲಾತಿಗೆ ಆರ್‌ಬಿಐ ನಿಗದಿ ಪಡಿಸಿರುವ ವಾನದಂಡಗಳನ್ನು ಹೊರತುಪಡಿಸಿ ಮತ್ತಾವುದೇ ಕ್ರಮಗಳನ್ನು ಅಥವಾ ವಾಮವಾರ್ಗ ಕಂಡುಬಂದರೆ ಜಿಲ್ಲಾಡಳಿತ ಸಹಿಸುವುದಿಲ್ಲ.

ಯಶವಂತ ವಿ.ಗುರುಕರ್, ಜಿಲ್ಲಾಧಿಕಾರಿ

10 ವರ್ಷ ಶಿಕ್ಷೆ

ಸಾಲ ನೀಡುವಾಗ ಸಾಲ ಹಿಂತಿರುಗಿಸುವರ ಶಕ್ತನುಸಾರ ಕ್ರಮ ವಹಿಸಬೇಕು. ಲೋನ್ ಕಾರ್ಡ್‌ಗಳನ್ನು ಸೂಕ್ತವಾಗಿ ನಿರ್ವಹಣೆ ವಾಡಬೇಕು, ಸಾಲ ವಸೂಲಾತಿ ಏಜೆನ್ಸಿಯವರ ಹಿನ್ನೆಲೆ ತಿಳಿಸಬೇಕು, ಎಲ್ಲ ರಿಕವರಿ ಏಜೆನ್ಸಿಗಳ ಬಗ್ಗೆ ವಾಹಿತಿ ನೀಡಬೇಕು, ಸಾಲ ವಸೂಲಾತಿಯಲ್ಲಿ ಸವಾಜ ಘಾತುಕ ಶಕ್ತಿಗಳನ್ನು ಬಳಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಇದು ಜಿಲ್ಲಾಡಳಿತದ ಎಚ್ಚರಿಕೆ ಹಾಗೂ ಮನವಿ ಎಂದೇ ತಿಳಿಯಬೇಕು, ಸಾಲ ವಸೂಲಾತಿಯನ್ನು ವೈಯಕ್ತಿಕವಾಗಿ ಟಾರ್ಗೆಟ್ ವಾಡಬಾರದು. ಸಾಲ ವಸೂಲಾತಿಯಲ್ಲಿ ಕಠಿಣ ಕ್ರಮಗಳು ಕಂಡು ಬಂದರೆ ಹೊಸ ನಿಯಮದಂತೆ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.