ಚನ್ನರಾಯಪಟ್ಟಣ: ಜೀವ ವೈವಿಧ್ಯ ತಾಣವಾಗಿರುವ ಹುಣಸೆತೋಪು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪ್ರಾದೇಶಿಕ ಆಯುಕ್ತ ನವೀನ್‌ಕುಮಾರ್ ಹೇಳಿದರು.
ಹೋಬಳಿಯ ನಲ್ಲೂರಿನ ಪುರಾತನ ಗಂಗಾದೇವಿ ದೇವಾಲಯ ಆವರಣದಲ್ಲಿ ಭಾನುವಾರ ಹುಣಸೆತೋಪು ಹಾಗೂ ಹಳೇ ದೇವಾಲಯ ವೀಕ್ಷಿಸಿ ಮಾತನಾಡಿದರು.
ಜಾಗದ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು, ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲಾಗುವುದು. 52 ಎಕರೆ ಜಾಗದಲ್ಲಿರುವ ಹುಣಸೆತೋಪು ರಕ್ಷಣೆ ಮಾಡಿರುವುದು ಹೆಮ್ಮೆಯ ವಿಷಯ. ಈ ಪ್ರದೇಶದಲ್ಲಿ ದೇವಾಲಯ ಇರುವುದರಿಂದ ಪ್ರವಾಸಿಗರಿಗೆ ವಾಹನ ನಿಲುಗಡೆ ಹಾಗೂ ಇನ್ನಿತರ ಸೌಲಭ್ಯ ಒದಗಿಸಲಾಗುವುದು ಎಂದರು.
ನಲ್ಲೂರು ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಸಂಘದ ನಿರ್ದೇಶಕ ಆನಂದ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜ್, ದೇವಾಲಯ ಸಮಿತಿ ಸದಸ್ಯ ಭೀಮಣ್ಣ, ಅರ್ಚಕ ಅಶ್ವತ್ಥನಾರಾಯಣ್, ಕರ ವಸೂಲಿಗಾರ ರಾಮಯ್ಯ ಹಾಜರಿದ್ದರು.