ಕುಣಿಗಲ್​ ತಾಲೂಕು ಕಚೇರಿಗೆ ಭೇಟಿ ನೀಡಿದ್ದ ರಾಜೇಂದರ್​ ಕುಮಾರ್​ ಕಠಾರಿಯಾ ಅಧಿಕಾರಿ, ಸಿಬ್ಬಂದಿಗೆ ಸೂಚನೆಗಳನ್ನು ನೀಡಿದರು. ಶುಭಕಲ್ಯಾಣ್​, ತಿಪ್ಪೇಸ್ವಾಮಿ, ಗೌರವ್​ಕುಮಾರ್​ ಶೆಟ್ಟಿ, ರಶ್ಮಿ ಮತ್ತಿತರರು ಇದ್ದರು. 
ಜಿಲ್ಲೆ

ಪೇಪರ್​ ರಹಿತ ಇಲಾಖೆಗೆ ಕ್ರಮ

ತುಮಕೂರು ಡೆಸ್ಕ್

ಕಂದಾಯ ವಿಭಾಗದ ಪ್ರಧಾನ ಕಾರ್ಯದರ್ಶಿ ರಾಜೇಂದರ್​ ಕುಮಾರ್​ ಕಠಾರಿಯಾ ಮಾಹಿತಿ

ಕುಣಿಗಲ್​:ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮುಂದಾಗಿರುವ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್​ ಕುಮಾರ್​ ಕಠಾರಿಯಾ ಅವರು ಸೋಮವಾರ ಕುಣಿಗಲ್​ ತಾಲೂಕು ಕಚೇರಿಗೆ ದಿಢೀರ್​ ಭೇಟಿ ನೀಡಿ

ಕಡತ ಪರಿಶೀಲನೆ ನಡೆಸಿದರು. ಬಾಡಿಗೆ ಕಟ್ಟಡದಲ್ಲಿ ಇರುವ ಸಬ್​ ರಿಜಿಸ್ಟರ್​ ಕಚೇರಿಯನ್ನು ತಾಲೂಕು ಆಡಳಿತ ಸೌಧಕ್ಕೆ ಕೂಡಲೇ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ದಾಖಲೆಗಳ ತಿದ್ದುಪಡಿ, ದಾಖಲೆಗಳ ದುರುಪಯೋಗ, ವರದಿಗಳ ಕಳವು ತಡೆಗಟ್ಟುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಸಚಿವರ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದೆಲ್ಲೆಡೆ ಎಲ್ಲ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದರು. ಈ ಕ್ರಾಂತಿಕಾರಕ ಕಾರ್ಯಕ್ರಮದಿಂದ ಜ.10 ರಿಂದ 15 ದಿನದಲ್ಲಿ ಅವರು ಬಯಸುವ ಎಲ್ಲ ಕಂದಾಯ ದಾಖಲೆಗಳನ್ನು ವೆಬ್​ಸೆಟ್​ನಲ್ಲಿ ನೋಡಬಹುದಾಗಿದ್ದು, ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈತರು ಹಾಗೂ ನಾಗರಿಕರ ದಾಖಲೆ ಸುರತೆ, ಸುಲಭ ಲಭ್ಯತೆಗಾಗಿ, ಈಗಾಗಲೇ ಕಂದಾಯ ಇಲಾಖೆಯನ್ನು ಡಿಜಿಟಲೀಕರಣ ಮಾಡಲಾಗಿದೆ. ಮುಂದಿನ ದನದಲ್ಲಿ ಪೇಪರ್​ ರಹಿತ ಇಲಾಖೆಯನ್ನಾಗಿ ಮಾಡಲು ಉದ್ದೇಶಿಸಲಾಗಿದೆ, ಗ್ರಾಮ ಆಡಳಿತ ಅಧಿಕಾರಿ, ರಾಜಸ್ವ ನಿರೀ ಹಾಗೂ

ನಾಡ ಕಚೇರಿಗಳಿಗೆ ಲ್ಯಾಪ್​ಟಾಪ್​ ನೀಡಲಾಗುವುದು ಎಂದರು.

ಕಂದಾಯ ಇಲಾಖೆಗೆ ಹೊಸ ರೂಪ ಕೊಡುವ ಉದ್ದೇಶದಿಂದ ಮೊದಲನೇ ಹಂತದಲ್ಲಿ ಭೂಮಿ ದಾಖಲೆಗಳನ್ನು ಸರಿಪಡಿಸುವುದು, ಸರ್ಕಾರಿ ಜಾಗ ಗುರುತಿಸುವುದು ಸೇರಿದಂತೆ ಪೋಡಿ ಮುಕ್ತ ಅಂದೋಲನ, ಬಗರ್​ ಹುಕುಂ ದಾಖಲೆ ವಿಲೇವಾರಿಗೆ ಕ್ರಮಕೆಗೊಳ್ಳಾಗಿದೆ ಹಾಗೂ ಸರ್ವೇ ಇಲಾಖೆಗೆ ಸಂಬಂಧಪಟ್ಟಂತೆ ಕೆಲಸಗಳು ಸಾಕಷ್ಟು ಬಾಕಿ ಇದ್ದು ಇದರ ಬಗ್ಗೆ ಕ್ರಮ ಕೆಗೊಳ್ಳಲಾಗಿದೆ ಎಂದರು. ಸಾಕಷ್ಟು ಕಡೆ 60 ವರ್ಷ, 50 ವರ್ಷ ಆಗಿದೆ ಈವರೆಗೂ ಪೋಡಿ ಆಗಿಲ್ಲ, ಒಂದೇ ಸರ್ವೇ ನಂಬರ್​ನಲ್ಲಿ ನೂರಾರೂ ಎಕರೆ ಗ್ರಾಟ್​ ಆಗಿದೆ. ಈ ಹಿಂದೆ ಇದ್ದ ವ್ಯವಸ್ಥೆಯಿಂದ ಬಡವರಿಗೆ ಅನುಕೂಲವಾಗಿರಲಿಲ್ಲ, ಈಗ ಒಂದೇ ಸರ್ವೇ ನಂಬರ್​ನಲ್ಲಿ ಎಲ್ಲವನ್ನೂ ಗ್ರಾಟ್​ ಒಟ್ಟಿಗೆ ಮಾಡಿ, ಪೋಡಿ ಅಭಿಯಾನ ಶುರು ಮಾಡಲಾಗಿದೆ ಇದಾದ ಬಳಿಕ ಇತರ ಪ್ರಕ್ರಿಯೆಯನ್ನು ಮಾಡಿ ಪೋಡಿ ಮಾಡಿಕೊಡಲಾಗುವುದು ಎಂದರು.

ಕಂದಾಯ ಕೋರ್ಟ್​ ಕೇಸ್​ ಮಾನಿಟರಿಂಗ್​ ಸಿಸ್ಟಮ್​ (ಆರ್​ಸಿಸಿಎಂಎಸ್​ ) ಜಾರಿ ಮಾಡಲಾಗಿದ್ದು, ನ್ಯಾಯಾಲಯ ಪ್ರಕರಣಗಳ ಮೇಲ್ವಿಚಾರಣೆಗಾಗಿ ವೆಬ್​ ಸಕ್ರಿಯಗೊಳಿಸಿದ ಅನ್ವಯವಾಗಿದೆ. ಎಲ್ಲ ನ್ಯಾಯಾಲಯ ಪ್ರಕರಣಗಳ ಪ್ರವೇಶ ಪ್ರಾರಂಭಿಸಿ ಎಲ್ಲ ಪ್ರಕ್ರಿಯೆಗಳನ್ನೂ ರೆಕಾರ್ಡಿಂಗ್​ ಮತ್ತು ಪ್ರತಿಯೊಂದು ಪ್ರಕರಣದ ಕಾಪಾಡಿಕೊಳ್ಳುವುದು. ತಹಸೀಲ್ದಾರ್​, ಕಂದಾಯ ಕಾರ್ಯದರ್ಶಿ, ಸರ್ವೆ ಕಮಿಷನರ್​ ವರೆಗೆ ಆರ್​ಸಿಸಿಎಂಎಸ್​ ಮಾನಿಟರಿಂಗ್​ ಸಿಸ್ಟಮ್​ ತರಲಾಗಿದೆ ಎಂದರು. ಜಿಲ್ಲಾಧಿಕಾರಿ ಶುಭಕಲ್ಯಾಣ್​, ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಎಸಿ ಗೌರವ್​ಕುಮಾರ್​ ಶೆಟ್ಟಿ, ತಹಸೀಲ್ದಾರ್​ ರಶ್ಮಿ ಮತ್ತಿತರರು ಇದ್ದರು.

ಕ್ಯಾಟಗಿರಿ ಮೇಲೆ ದಾಖಲೆ ವಿಭಾಗ

ಕಂದಾಯ ಇಲಾಖೆಯಲ್ಲಿ ಎ, ಬಿ, ಸಿ, ಡಿ ಮತ್ತು ಇ ಕ್ಯಾಟಗಿರಿ ಇದ್ದು, ಕಾಯಂ ರಿಪೋಟ್​ ಎ ಕ್ಯಾಟಗಿಯಲ್ಲಿ ಇರುತ್ತದೆ. ಬಿ ಕ್ಯಾಟಗಿಯಲ್ಲಿ 30 ವರ್ಷ ದಾಖಲೆ ರಣೆ ನೀಡಬೇಕು, ಸಿ ಕ್ಯಾಟಗಿರಿಯಲ್ಲಿ 10 ವರ್ಷ ದಾಖಲೆ ರಣೆ ಮಾಡಬೇಕು. ಡಿ ಕ್ಯಾಟಗಿಯಲ್ಲಿ 5 ವರ್ಷ ದಾಖಲೆಗಳನ್ನು ರಣೆ ಮಾಡಬೇಕು. ಇ ಕ್ಯಾಟಗಿರಿಯಲ್ಲಿ ಒಂದು ವರ್ಷದ ದಾಖಲೆಗಳನ್ನು ರಣೆ ಮಾಡಬೇಕು. ಈ ಪೈಕಿ ಎ ಮತ್ತು ಬಿ ಕ್ಯಾಟಗಿರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಭೂ ಹಾಗೂ ದರಖಾಸು ದಾಖಲೆಗಳು ಇರುತ್ತದೆ. ಹಲವು ಜಿಲ್ಲೆಗಳಲ್ಲಿ ದಾಖಲೆಗಳು ದುರುಪಯೋಗವಾಗುತ್ತಿದೆ, ಮನಸ್ಸಿಗೆ ಬಂದ ಹಾಗೆ ದಾಖಲೆಗಳು ತಿದ್ದುಪಡಿ ಆಗುತ್ತಿದೆ. ವರದಿಗಳು ಕಳ್ಳತನವಾಗುತ್ತದೆ ಇದನ್ನು ತಡೆಯಲು ಎಲ್ಲ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಸ್ಕಾ ್ಯನ್​ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ 10 ಕೋಟಿ ದಾಖಲೆಗಳನ್ನು ಸ್ಕಾ ್ಯನ್​ ಮಾಡಿ ವೆಬ್​ ಸೆಟ್​ನಲ್ಲೂ ಹಾಕಲಾಗಿದೆ ಎಂದು ಕಟಾರಿಯಾ ಮಾಹಿತಿ ನೀಡಿದರು.